ಸುದ್ದಿಗಳು

ಚಪ್ಪಲಿಯಿಲ್ಲದೇ ‘ಹುಚ್ಚ’ನಂತೆ ತಿರುಗಾಡುತ್ತಿರುವ ಹುಚ್ಚ ವೆಂಕಟ್..!!!

ಸದಾ ಒಂದಿಲ್ಲೊಂದು ವಿವಾದ, ಅಬ್ಬರದ ಮಾತುಗಳ ಮೂಲಕ ಸುದ್ದಿಯಾಗುವ ಹುಚ್ಚ ವೆಂಕಟ್ ಇದೀಗ ಮತ್ತೊಂದು ವಿಚಾರದಿಂದಾಗಿ ಸುದ್ದಿಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿನಿಮಾವೊಂದನ್ನು ಮಾಡುವುದಾಗಿ ಸುದ್ದಿಗೋಷ್ಟಿ ನಡೆಸಿ ಸದ್ದು ಮಾಡಿದ್ದರು. ಇದೀಗ ಇವರು ಚೆನೈನಲ್ಲಿ ಬರಿಗಾಲಿನಲ್ಲಿ ಹುಚ್ಚನಂತೆ ಓಡಾಡುತ್ತಿದ್ದಾರೆ.

ಹೌದು, ಚೆನ್ನೈ ಬೀದಿಗಳಲ್ಲಿ ಹುಚ್ಚ ವೆಂಕಟ್ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ಇವರು ಹುಚ್ಚನಂತೆ ಹೋಗುತ್ತಿರುವುದನ್ನು ‘ರಾಂಧವ’ ಚಿತ್ರತಂಡದವರು ನೋಡಿದ್ದಾರೆ. ಈ ಕುರಿತಂತೆ ನಟ ಭುವನ್ ಪೊನ್ನಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ದಯವಿಟ್ಟು ಅವರಿಗೆ ಸಹಾಯ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ.

‘ಗೆಳೆಯರೇ, ಹುಚ್ಚ ವೆಂಕಟ್ ಯುಟ್ಯೂಬ್ ಸ್ಟಾರ್ ಅವರ ಈ ವಿಡಿಯೋ ನೋಡಿ ನನಗೆ ಕರಳು ಚಿವುಟಿದ ಹಾಗೆ ಆಯಿತು. ಹಾಕುವುದಕ್ಕೆ ಕಾಲಿಗೆ ಚಪ್ಲೀನೂ ಇಲ್ಲದೇ ಚೆನ್ನೈ ನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ‘ರಾಂಧವ’ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಫ್ಯಾಮಿಲಿ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು. ಸಹಾಯ ಮಾಡೋಣ. ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಪಾಪ..!


ಸದಾ ‘ನನ್ನ ಯಕ್ಕಡಾ’ ಎಂದು ಅಬ್ಬರಿಸುವ ಹುಚ್ಚ ವೆಂಕಟ್ ರ ಕಾಲಿನಲ್ಲಿ ಚಪ್ಪಲ್ಲಿ ಇಲ್ಲದಿರುವುದು ಸದ್ಯ ಬಾರೀ ದುಃಖಕ್ಕಿಡು ಮಾಡುತ್ತಿದೆ. ಆದರೆ, ಅವರು ಚೆನೈ ಗೆ ಯಾಕೆ ಹೋಗಿದ್ದರು, ಈ ರೀತಿಯಾಗಿ ಏಕೆ ಓಡಾಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೌತಮಿ ಗೌಡ ದಂಪತಿಗಳು

#HuchchaVenkat  #randhava #kannadaSuddigalu #BhuvannaPonnanna

Tags