ಸುದ್ದಿಗಳು

ತಾಯಿಯಂತಿರುವ ಸಹೋದರಿಯರನ್ನು ನೆನೆದ ಜಗ್ಗೇಶ್

ಇಂದು ‘ಅಣ್ಣ-ತಂಗಿ’ ಬಾಂಧವ್ಯ ಬೆಸೆಯುವ ರಕ್ಷಾ ಬಂಧನದ ಸಂಭ್ರಮ

ನವರಸ ನಾಯಕ ಜಗ್ಗೇಶ್, ತಮ್ಮ ಇಬ್ಬರು ಸಹೋದರಿಯರನ್ನು ನೆನಪಿಸಿಕೊಂಡು ನಾಡಿನ ಎಲ್ಲಾ ಸಹೋದರಿಯರಿಗೂ ರಕ್ಷಾಬಂಧನ ಶುಭಾಷಯಗಳನ್ನು ತಿಳಿಸಿದ್ದಾರೆ.

ಬೆಂಗಳೂರು, ಆ. 26: ಇಂದು ನಾಡಿನ ತುಂಬಾ ರಕ್ಷಾಬಂಧನದ ಸಂಭ್ರಮ. “ಅಣ್ಣ-ತಂಗಿ” ಎಂಬ ಆ ಎರಡಕ್ಷರದ ಗಟ್ಟಿ ಸಂಬಂಧಕ್ಕೆ ಬೆಲೆ ಕಟ್ಟಲಾಗದ್ದು. ಇದು ಬರೀ ಸಾಮಾನ್ಯ ಜನರಿಗೆ ಮಾತ್ರ ಅನ್ವಯಿಸುವಂಥದ್ದಲ್ಲಾ, ಸಿನಿಮಾ ಕಲಾವಿದರೂ ಈ ಸಂಭಂದದ ಬಗ್ಗೆ ಗೌರವ ನೀಡುತ್ತಾರೆ. ಈ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಇಬ್ಬರು ಸಹೋದರಿಯರ ಬಗ್ಗೆ ಮಾತನಾಡಿದ್ದಾರೆ.

ಜಗ್ಗೇಶ್ ಅವರ ಸಹೋದರಿಯರ ಬಗ್ಗೆ

‘ನನ್ನೊಟ್ಟಿಗೆ ಈಗ ನನ್ನ ಅಮ್ಮ ಇಲ್ಲಾ, ಆದರೆ ಅವರು ಬಿಟ್ಟೋಗುವಾಗ , ಪ್ರತಿನಿಧಿಯಂತೆ ಅವಳ ರೂಪದಲ್ಲಿ ಅಕ್ಕಂದಿರನ್ನು ನನಗೆ ನೀಡಿ ಹೋಗಿದ್ದಾರೆ. ನನಗೆ ಅಮ್ಮನ ನೆನಪಾದರೆ ಇವರ ಕಂಡು ಸಮಾಧಾನಪಡುವೆ. ಇವರಿಬ್ಬರು ತೋರುವ ಪ್ರೀತಿ ಅಮ್ಮನ ಪ್ರೀತಿಗೆ ಸಮ..ನಾನು ಎಲ್ಲಿಯೇ ಇದ್ದರೂ ದಿನವೆಲ್ಲಾ ದೂರವಾಣಿಯಲ್ಲಿ ಇವರ ಜೊತೆ ನನ್ನ ಹರಟೆ ತಪ್ಪುವುದಿಲ್ಲ. ನಾಡಿನ ಎಲ್ಲಾ ನನ್ನ ಸಹೋದರಿಯರಿಗೆ ರಕ್ಷಾಬಂಧನ ಶುಭಾಷಯಗಳು. ಇಂತಿ ನಿಮ್ಮ ಸಹೋದರ” ಎಂದು ಜಗ್ಗೇಶ್ ತನ್ನ ಪ್ರೀತಿಯ ಸಹೋದರಿಯರ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ನಾಡಿನ ಎಲ್ಲಾ ನನ್ನ ಸಹೋದರಿಯರಿಗೆ ರಕ್ಷಾಬಂಧನ ಶುಭಾಷಯ ಎಂದು ತಿಳಿಸಿದ್ದಾರೆ.

Tags