ಸುದ್ದಿಗಳು

ಕಮಲ್ ಹಾಸನ್ ಅಭಿನಯದ ಕನ್ನಡ ಸಿನಿಮಾಗಳಿವು

ಇಂದು ನಟ ಕಮಲ್ ಹಾಸನ್ 65ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ಬರೀ ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಹಿಂದಿ, ಮಲೆಯಾಳಂ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಪಂಚಭಾಷಾ ಕಲಾವಿದ ಎನಿಸಿಕೊಂಡಿದ್ದಾರೆ.

ಅಂದ ಹಾಗೆ ಕಲಾವಿದರಿಗೆ ಭಾಷೆ ಮತ್ತು ಗಡಿಯ ಹಂಗಿಲ್ಲ ಎನ್ನುವುದು ಕಮಲ್ ಹಾಸನ್ ರಿಗೆ ಅಕ್ಷರಶಃ ಅನ್ವಯಿಸುತ್ತದೆ. ಹಾಗಾಗಿಯೇ ಅವರು ಯಾವುದೇ ಭಾಷೆಯಲ್ಲಿ ಅಭಿನಯಿಸಿದರೂ ತಮ್ಮ ವಿಭಿನ್ನ ನಟನೆಯಿಂದ ಗಮನ ಸೆಳೆಯುತ್ತಾರೆ. ಅಂದ ಹಾಗೆ ಅವರು ಒಟ್ಟು 6 ಸಿನಿಮಾಗಳಲ್ಲಿ ನಟಿಸಿದ್ದಾರೆ.

1977 ರಲ್ಲಿ ತೆರೆ ಕಂಡ ‘ಕೋಕಿಲ’ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರವನ್ನು ಬಾಲು ಮಹೇಂದ್ರ ನಿರ್ದೇಶಿಸಿದ್ದರು. ಇದೇ ಚಿತ್ರವು ಹಿಂದಿ ಭಾಷೆಗೆ ‘ಔರ್ ಏಕ್ ಪ್ರೇಮ್ ಕಹಾನಿ’ ‘ ಎಂಬ ಹೆಸರಲ್ಲಿ ರೀಮೇಕ್ ಆಯಿತು. ನಂತರ ರಜನಿಕಾಂತ್ ರೊಂದಿಗೆ ‘ತಪ್ಪಿದ ತಾಳ’ ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಅವರದ್ದು ಪುಟ್ಟ ಪಾತ್ರವಾದರೂ ಅವರೇ ಡಬ್ ಮಾಡಿದ್ದರು.

1980 ರಲ್ಲಿ ತೆರೆ ಕಂಡ ‘ಮರಿಯಾ ಮೈ ಡಾರ್ಲಿಂಗ್’, 1983 ರಲ್ಲಿ ತೆರೆ ಕಂಡ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರಗಳಲ್ಲಿ ಕಮಲ್ ಹಾಸನ್ ಅಭಿನಯಿಸಿದರು. ನಂತರ ಸುಮಾರು ವರ್ಷಗಳ ಬಳಿಕ ರಮೇಶ್ ಅರವಿಂದ್ ನಿರ್ದೇಶನದ ‘ರಾಮ ಶಾಮ  ಭಾಮ ’ ಚಿತ್ರಗಳಲ್ಲಿ ಅಭಿನಯಿಸಿದರು. ಇನ್ನು ಎಲ್ಲಾ ಭಾಷೆಯಲ್ಲಿಯೂ ಸಲ್ಲುವ ಮೂಕಿ ಸಿನಿಮಾ ‘ಪುಷ್ಕಕ ವಿಮಾನ’ದಲ್ಲೂ ಅಭಿನಯಿಸಿದ್ದರು.

‘ಭೀಷ್ಮಾ’ ಚಿತ್ರದ ಫಸ್ಟ್ ವಿಡಿಯೋ ತುಣುಕು ರಿಲೀಸ್

#KamalHaasan #KamalHaasanMovie  #KamalHaasanKannadaMovie #KamalHaasanBirthday

Tags