ಸುದ್ದಿಗಳು

ಅಮಿತ್ ಶಾ ಗೆ ಎಚ್ಚರಿಕೆ ನೀಡಿದ ನಟ ಕಮಲ್ ಹಾಸನ್

ಭಾರತದಾದ್ಯಂತ ಹಿಂದಿ ಹೇರಲು ಉದ್ದೇಶಿಸಿರುವ ಅಮಿತ್ ಷಾ ಅವರ ಹೇಳಿಕೆಯ ನಂತರ, ರಾಷ್ಟ್ರದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

ಈಗ ನಟ ಮತ್ತು ಮಕ್ಕಲ್  ನೀಧಿ ಮಾಯಂ ಪಕ್ಷದ ನಾಯಕ ಕಮಲ್ ಹಾಸನ್ ವಿಡಿಯೋವೊಂದರಲ್ಲಿ ಅಮಿತ್ ಶಾ ಅವರ ಹೇಳಿಕೆಯ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

“ಭಾರತವು ರಾಜರ ಅನೇಕ ಸಾಮ್ರಾಜ್ಯಗಳ ತ್ಯಾಗದಿಂದ ಹುಟ್ಟಿದೆ. ಆದರೆ ವಿವಿಧ ಸ್ಥಳಗಳ ಜನರು ತ್ಯಾಗ ಮಾಡಲು ನಿರಾಕರಿಸಿದ ಒಂದು ವಿಷಯವೆಂದರೆ ಅವರ ಭಾಷೆ ಮತ್ತು ಸಂಸ್ಕೃತಿ. 1950 ರಲ್ಲಿ ಭಾರತ ಗಣರಾಜ್ಯವಾದಾಗ, ಸರ್ಕಾರವು ಈ ಬಗ್ಗೆ ಜನರಿಗೆ ಭರವಸೆ ನೀಡಿತು. ಆದರೆ ಈಗ ಶಾ ಆ ಭರವಸೆ  ಮುರಿಯಲು ಪ್ರಯತ್ನಿಸಬಾರದು” ಎಂದು ಕಮಲ್ ಹೇಳಿದ್ದಾರೆ.

“ಜಲ್ಲಿಕಟ್ಟು ಒಂದು ಸಣ್ಣ ಪ್ರತಿಭಟನೆ. ಸಣ್ಣ ಗೆಲುವು. ಆದರೆ ನಮ್ಮ ಭಾಷೆಗಾಗಿ ಹೋರಾಡಲು ನಿರ್ಧರಿಸಿದರೆ ಅದು ದೊಡ್ಡದಾಗಿ ಬೆಳೆಯುತ್ತದೆ. ಇದು ಅಪಾಯಕಾರಿ. ಬಂಗಾಳಿಗಳನ್ನು ಹೊರತುಪಡಿಸಿ, ಭಾರತೀಯರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲ. ಆದರೂ ಅವರು ಸಂತೋಷದಿಂದ ಹಾಡುತ್ತಾರೆ. ಏಕೆಂದರೆ ಅದರಲ್ಲಿ ಕವಿ ಇತರ ಭಾಷೆಗಳನ್ನು ಗೌರವಿಸಿದ್ದಾರೆ. ಭಾರತೀಯನಾಗಿರುವುದು ಒಂದು ದೊಡ್ಡ ವಿಷಯ. ಭಾವನೆಯನ್ನು ಹಂಚಿಕೊಳ್ಳಲು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ನೋಡಲು ಅವಕಾಶ ಮಾಡಿಕೊಡಿ. ಜನರ ಮೇಲೆ ಏನನ್ನೂ ಒತ್ತಾಯಿಸಬಾರದು “ಎಂದು ಕಮಲ್ ತಿಳಿಸಿದ್ದಾರೆ.

ವಿಡಿಯೋವನ್ನು ತಮಿಳು ಮತ್ತು ತಮಿಳುನಾಡಿನ ಜನರನ್ನು ಹೊಗಳಿದ ಘೋಷಣೆಗಳೊಂದಿಗೆ ಕೊನೆಗೊಳಿಸಲಾಗಿದೆ.

ಬಿಗ್ ಬಾಸ್ 13 ರಲ್ಲಿ ಪ್ರತ್ಯಕ್ಷವಾಗಲಿರುವ ರಾಕಿ ಪತಿ?

#balkaninews #kamalhaasan #video #hindi

Tags