ಸುದ್ದಿಗಳು

ಕನ್ನಡಪರ ಹೋರಾಟಗಾರರಿಗೆ ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೋ ಬೇಡವೋ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಈಗ ಡಬ್ಬಿಂಗ್ ಪರ ಕನ್ನಡದ ಕಲಾವಿದರು ಸಹ ನಿಲ್ಲುತ್ತಿದ್ದಾರೆ. ಅಚ್ಚರಿಯೆಂದರೆ ಇಷ್ಟು ದಿನಗಳ ಕಾಲ ರಿಲೀಸ್ ಆಗಿದ್ದ ಡಬ್ಬಿಂಗ್ ಚಿತ್ರಗಳು ಅಷ್ಟೊಂದು ಸದ್ದು ಮಾಡಿರಲಿಲ್ಲ. ಆದರೆ ‘ಸೈರಾ ನರಸಿಂಹರೆಡ್ಡಿ’ ಗೆದ್ದಿದೆ.

ಹೌದು, ‘ಸೈರಾ..’ ಚಿತ್ರದ ಕನ್ನಡ ಅವತರಣಿಕೆ ಗೆದ್ದಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಸಹ ಹೌದು. ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಈ ಕಾರಣಕ್ಕಾಗಿಯೇ ಕನ್ನಡ ಪರ ಸಂಘಟನೆಗಳು ಅವರನ್ನು ಸನ್ಮಾನಿಸಿದ್ದರು.

ಇದೇ ವೇಳೆ ಸುದೀಪ್ ರಿಗೆ ‘ಮಂಕುತಿಮ್ಮನ ಕಗ್ಗ’ ಮತ್ತು ”ಪ್ರೀತಿಯಿಂದ ಕಿಚ್ಚ ಸುದೀಪ್” ಎಂದು ಪ್ರಿಂಟ್ ಆಗಿರುವ ಲೇಖನಿಯನ್ನು ಉಡುಗೊರೆಯಾಗಿ ನೀಡಿ ಕಳುಹಿಸಿದ್ದಾರೆ. ಸುದೀಪ್ ರವರ ಈ ಸಂಸ್ಕಾರ-ಅಭಿರುಚಿಗೆ ಕಂಡು ಕನ್ನಡ ಪರ ಹೋರಾಟಗಾರರು ಶರಣಾಗಿದ್ದಾರೆ.

‘ಡಬ್ಬಿಂಗ್ ಪರ ನಿಂತಿದ್ದಕ್ಕಾಗಿ ಕಿಚ್ಚ ಸುದೀಪ್ ರವರನ್ನು ಅಭಿನಂದಿಸಲು ಹೋದ ಕನ್ನಡ ಸಂಘಟನೆಗಳ ಪ್ರಮುಖರಿಗೆ ಕಿಚ್ಚರವರು ಬರೀ ಫೋಟೋಗೆ ಪೋಸ್ ಕೊಟ್ಟು ಕಳಿಸ್ಲಿಲ್ಲ. ಮಂಕುತಿಮ್ಮನ ಕಗ್ಗ ಮತ್ತು ಸುಂದರವಾದ ಲೇಖನಿಯನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದ್ದಾರೆ. ಅವರ ಸಂಸ್ಕಾರ – ಅಭಿರುಚಿಗೆ ಶರಣು. ಸಂಸ್ಕಾರ ಅಂದ್ರೆ ಇದೇ ಅಲ್ವ’ ಎಂದು ಕನ್ನಡ ಪರ ಹೋರಾಟಗಾರರು ಟ್ವೀಟ್ ಮಾಡಿದ್ದಾರೆ.

‘ಕಿಸ್’ ಸಿನಿಮಾ ನೋಡಿ ಬಹಳ ಖುಷಿಪಟ್ಟೆ: ರಾಕಿಂಗ್ ಸ್ಟಾರ್ ಯಶ್

#kicchaSudeepor  #kicchaSudeepMovie #SyraNarasihmareddy #DubbingMovies #kannadaSuddigalu

Tags