ಸುದ್ದಿಗಳು

ಪ್ಯಾನ್ ಇಂಡಿಯಾ ಧಾರಾವಾಹಿಯಲ್ಲಿ ಮಿಂಚಿದ ಕನ್ನಡದ ಹುಡುಗ ಲಕ್ಷ್ಮೀಶ್ ಭಟ್

ಬಹುಭಾಷೆಯಲ್ಲಿ ತಯಾರಾಗಿದ್ದ ‘ಸ್ವರ್ಣ ಖಡ್ಗಂ’ ಧಾರಾವಾಹಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಲಕ್ಷ್ಮೀಶ್ ಭಟ್‌ ಕಾಣಿಸಿಕೊಂಡಿದ್ದರು. ಈ ಮೂಲಕ ಕನ್ನಡದ ಪ್ರತಿಭಾವಂತ ಕಲಾವಿದ ಪರಭಾಷೆಯಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದರು.

‘ಸ್ವರ್ಣ ಖಡ್ಗಂ’ನಲ್ಲಿ ಅಭಿನಯ

ಹೀಗೆ, ಪರಭಾಷೆಯಲ್ಲಿ ಸಕ್ರಿಯರಾಗಿದ್ದು ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ ಬ್ಯೂಸಿಯಾಗಿರುವ ಹಲವು ಕಲಾವಿದರಲ್ಲಿ ನಟ ಕನ್ನಡದ ಹುಡುಗ ಲಕ್ಷ್ಮೀಶ್ ಭಟ್ ಕೂಡಾ ಒಬ್ಬರು. ಇವರು ಕೆಲವು ತಿಂಗಳ ಹಿಂದೆಯಷ್ಟೇ ತೆಲುಗಿನಲ್ಲಿ ಪ್ರಸಾರವಾಗಿದ್ದ ‘ಸ್ವರ್ಣ ಖಡ್ಗಂ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಪ್ಯಾನ್ ಇಂಡಿಯಾ ಧಾರಾವಾಹಿ

ವಿಶೇಷವೆಂದರೆ ‘ಸ್ವರ್ಣ ಖಡ್ಗಂ’ ಧಾರಾವಾಹಿಯು ತೆಲುಗಿನ ಬಳಿಕ ನಾಲ್ಕೈದು ಭಾಷೆಗಳಿಗೆ ಡಬ್ ಆಗಿತ್ತು.  ಈ ಧಾರಾವಾಹಿಯು ಮೂಲ ಶೂಟಿಂಗ್ ಆಗಿದ್ದು ತೆಲುಗಿನಲ್ಲಿ ಹಾಗೆಯೇ ಪ್ರಸಾರ ಕಂಡಿದ್ದು ಈ ಟಿವಿ ತೆಲುಗು ವಾಹಿನಿಯಲ್ಲಿ. ಆ ಬಳಿಕ ಈ ಧಾರಾವಾಹಿಯನ್ನು ಕಲರ್ಸ್ ಕನ್ನಡ ಚಾನಲ್ ಖರೀದಿಸಿ, ಅದನ್ನು ನಾಲ್ಕು ಭಾಷೆಗಳಿಗೆ ಡಬ್ ಮಾಡಲಾಯಿತು.

ಹೌದು, ಈ ಧಾರಾವಾಹಿಯು ತೆಲುಗು ಭಾಷೆಯಿಂದ ಕಲರ್ಸ್ ಓಡಿಯಾದಲ್ಲಿ ‘ಸ್ವರ್ಣ ಖಡ್ಗ’, ಕಲರ್ಸ್ ಬೆಂಗಾಳಿಯಲ್ಲಿ ‘ಶೋನಾ ತಲ್ವಾರ್’, ಕಲರ್ಸ್ ತಮಿಳ್ ‘ಇಳಿಯ ದಳಪತಿ’ ಕಲರ್ಸ್ ಮಲೆಯಾಳಿಯಲ್ಲಿ ‘ಸ್ವರ್ಣ ಖಡ್ಗಂ’  ಹೆಸರಿನಲ್ಲಿ ಡಬ್ ಆಗಿ ಪ್ರಸಾರಗೊಂಡಿತ್ತು. ಅಂದ ಹಾಗೆ ಈ ಧಾರಾವಾಹಿಯನ್ನು ‘ಬಾಹುಬಲಿ’ ಚಿತ್ರವನ್ನು ನಿರ್ಮಿಸಿದ್ದ ಅರ್ಕಾ ಮೀಡಿಯಾ ಸಂಸ್ಥೆಯು ನಿರ್ಮಿಸಿತ್ತು ಹಾಗೂ ಯಾಟಾ ಸತ್ಯನಾರಾಯಣ ಅವರು ಇದರ ನಿರ್ದೇಶಕರಾಗಿದ್ದರು.

‘ಸ್ವರ್ಣಖಡ್ಗಂ-2’ ಬರುವ ನಿರೀಕ್ಷೆ

ಅಂದ ಹಾಗೆ ‘ಸ್ವರ್ಣಖಡ್ಗಂ’ ಧಾರಾವಾಹಿಯು ಒಟ್ಟು 5 ಭಾಷೆಯಲ್ಲಿ ಪ್ರಸಾರಗೊಂಡು ನೋಡಿಗರಿಂದ ಭರ್ಜರಿ ಪ್ರಶಂಸೆ ಪಡೆಯಿತು ಹೀಗಾಗಿ ಇದರ ಮುಂದುವರೆದ ಭಾಗ, ಅಂದರೆ, ‘ಸ್ವರ್ಣ ಖಡ್ಗಂ ಭಾಗ-2’ ಮೂಡಿ ಬರುವ ನಿರೀಕ್ಷೆಯಿದ್ದು, ಈ ಧಾರಾವಾಹಿಯು  ಕನ್ನಡದಲ್ಲಿಯೂ ಸಹ ಪ್ರಸಾರವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ, ಸೀರಿಯಲ್ ನಲ್ಲೂ ಅಭಿನಯ

ಹೌದು, ನಟ ಲಕ್ಷ್ಮೀಶ್ ಭಟ್  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು. ಕನ್ನಡದಲ್ಲಿ ಇವರು ‘ಮನೆ  ತುಂಬ ಬರಿ ಜಂಭ’, ‘ಟೈಟಲ್ ಬೇಕಾ?’ ಸಿನಿಮಾ ಹಾಗೂ ‘ಬಾ ನನ್ನ ಸಂಗೀತ’, ‘ಪವಿತ್ರ ಬಂಧನ’, ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡದ ಹೆಮ್ಮೆಯ ನಟ

‘ಬಾಹುಬಲಿ’ ಚಿತ್ರದಲ್ಲಿ ಪ್ರಭಾಸ್ ಮಾಡಿದ್ದ, ಮಹೇಂದ್ರ ಬಾಹುಬಲಿಯಂತಹ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಕಾಣಿಸಿಕೊಂಡಿದ್ದರು. ಇನ್ನು ಈ ಧಾರಾವಾಹಿಯಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳಿಗೆ ಭರ್ಜರಿ ತರಬೇತಿ ನೀಡಲಾಗಿತ್ತು.

ಯುವಕನ ಪಾತ್ರಕ್ಕೂ ಸೈ, ಕುರೂಪಿ ಪಾತ್ರಕ್ಕೂ ಜೈ

ಇನ್ನು ಹೆಸರೇ ಹೇಳುವಂತೆ ಇಲ್ಲಿ ಖಡ್ಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಅದನ್ನು ಅರಿತೇ ಲಕ್ಷ್ಮೀಶ್ ಭಟ್ ಕತ್ತಿ ವರಸೆ, ಕುದುರೆ ಸವಾರಿ ಸೇರಿದಂತೆ ಅನೇಕ ವಿದ್ಯೆಗಳನ್ನು ಸತತ ಒಂದು ತಿಂಗಳ ಕಾಲ ಅಭ್ಯಾಸ ಮಾಡಿದ್ದಾರೆ. ಹಾಗೆಯೇ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನುರಿತ ಟ್ರೈನರ್ ಗಳಿಂದ ಪರಿಣಿತಿ ಹೊಂದಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ಮೂಡಿ ಬಂದ ‘ಐ’ ಚಿತ್ರದ ನಾಯಕನ ಪಾತ್ರದಾರಿ ವಿಕ್ರಮ್ ರಂತೆಯೆ ಕುರೂಪಿ ಪಾತ್ರವನ್ನು ಮಾಡಿದ್ದು, ಅದೇ ರೀತಿಯಲ್ಲಿಯೇ ಮೇಕಪ್ ಮಾಡಿಕೊಂಡಿದ್ದರು.

ಇನ್ನು ಈ ಧಾರಾವಾಹಿಯಲ್ಲಿ ಅವರು ಯುವಕ, ರಾಜಾ ಹಾಗೂ ಕುರೂಪಿಯಾಗಿ.. ಹೀಗೆ ಮೂರು ಶೇಡ್ ನಲ್ಲಿ ಬರುವುದು ವಿಶೇಷ. ಹೀಗೆ ವಿಭಿನ್ನ ಶೇಡ್ ಗಳಲ್ಲಿ ಅವರು ಪಾತ್ರ ನಿರ್ವಹಿಸಿರುವುದು ನಮಗೆಲ್ಲಾ ಖುಷಿ ತಂದಿದೆ. ಹೀಗಾಗಿ ಈ ಪ್ಯಾನ್ ಇಂಡಿಯಾ ಧಾರಾವಾಹಿಯಲ್ಲಿ ನಮ್ಮ ಕನ್ನಡದ ಹುಡುಗ ನಾಯಕನಟರಾಗಿ ನಟನೆ ಮಾಡಿದ್ದು ನಮಗೆಲ್ಲರಿಗೂ ಹೆಮ್ಮೆ ತರುವ ವಿಚಾರವೇ ಸರಿ.

ಹೀಗೆ ನಮ್ಮ ಕನ್ನಡದ ಹುಡುಗ ಬೇರೆ ರಾಜ್ಯದಲ್ಲಿ ನಮ್ಮ ಕನ್ನಡತನವನ್ನು ಮೆರೆದಿರುವುದು ನಮಗೆಲ್ಲಾ ಖುಷಿಯಾಗಿದೆ. ಇಂತಹ ಹುಡುಗನಿಗೆ ಮತ್ತೆ ನಾವು ನಮ್ಮ ಇಂಡಸ್ಟ್ರಿಯಲ್ಲಿ ಮಣೆ ಹಾಕಿ ಬೆಳೆಸಬೇಕಾದದ್ದು ನಮ್ಮ ಕರ್ತವ್ಯ ಮತ್ತು ಆಶಯವಾಗಿದೆ. ಅವರೂ ಸಹ ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಅಂತವರಿಗೆ ನಾವೆಲ್ಲರೂ ಸಪೋರ್ಟ್ ಮಾಡಬೇಕು.

ಪ್ಯಾನ್ ಇಂಡಿಯಾ ಸಿನಿಮಾ ಮಾಡಲ್ಲ, ಕನ್ನಡದಲ್ಲೇ ‘ಯುವರತ್ನ’ ತೋರಿಸ್ಥಿವಿ

#LakshmishBhat #LakshmishBhatMovie, #LakshmishBhatserial #Swarna Khadgam

Tags