ಸುದ್ದಿಗಳು

ನಿಜ ಜೀವನದಲ್ಲೂ ಅಭಿಮನ್ಯು ಆಗಿಬಿಟ್ಟೆ: ನಟ ನಿಖಿಲ್ ಕುಮಾರ್

ನಿನ್ನೆ (ನ.17) ರಾತ್ರಿ ತುಮಕೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ ಕಮ್ ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಪಾಲ್ಗೊಂಡಿದ್ದರು. ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದರು.

‘ಕುರುಕ್ಷೇತ್ರ’ ಚಿತ್ರದಲ್ಲಿ ನನ್ನದು ಪುಟ್ಟ ಪಾತ್ರವಾದರೂ ಎಲ್ಲರಿಂದ ಮೆಚ್ಚುಗೆ ಪಡೆದಿದ್ದೇನೆ. ನಾನು ರಾಜಕೀಯದಲ್ಲಿ ಸೋತಿದ್ದರೂ ಅಲ್ಲಿಯ ಅನುಭವ ಅಪಾರ. ಕುರುಕ್ಷೇತ್ರದ ಅಭಿಮನ್ಯು ನಿಜ ಜೀವನದಲ್ಲೂ ಅಭಿಮನ್ಯುವಾದ ಅನುಭವ ಪಡೆದಿದ್ದೇನೆ. ಕುರುಕ್ಷೇತ್ರದಲ್ಲಿ ಘಂಟೆ ಭಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವಂತಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ಬಂದು ಹಿತ ಶತ್ರುಗಳು ತಿವಿದಿದ್ದಾರೆ’ ಎಂದು ನಿಖಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಈ ವರ್ಷ ನಡೆದ ಮಂಡ್ಯ ಲೋಕಸಭಾ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆದಿತ್ತು. ನಟಿ ಸುಮಲತಾ ವಿರುದ್ದ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿದ್ದ ನಿಖಿಲ್ ಪರಾಜಯಗೊಂಡಿದ್ದರು. ‘ನಾನು ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲೂ ಮುಂದುವರೆಯುತ್ತಿದ್ದೇನೆ. ಮುಂದಿನ ವರ್ಷ ನನ್ನ ಮೂರು ಸಿನಿಮಾಗಳು ಶುರುವಾಗಲಿವೆ’ ಎಂದು ನಿಖಿಲ್ ಹೇಳಿದರು.

ತಾಪ್ಸಿ ಮದುವೆ ಆಗೋ ಹುಡುಗ ಹೀಗಿರಬೇಕಂತೆ !?

#NikhilKumaraswamy #Kurukshetra  #Abhimanyu #KannadaSuddigalu

Tags