ಸುದ್ದಿಗಳು

ಅಭಿಮಾನಿಯ ಜೊತೆ ಟಿಕ್ ಟಾಕ್ ವಿಡಿಯೋ ಮಾಡಿದ ಪವರ್ ಸ್ಟಾರ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವುದು ಟಿಕ್ ಟಾಕ್. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಟಿಕ್ ಟಾಕ್ ನನ್ನು ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಆ್ಯಪ್ ಬಹಳಷ್ಟು ವೈರಲ್ ಆಗಿದ್ದು, ಕುಂತರೂ ನಿಂತರೂ ಟಿಕ್ ಟಾಕ್ ನದ್ದೇ ಸುದ್ದಿಯಾಗಿದೆ. ಇದೀಗ ನಮ್ಮ ಚಂದನವನದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಅಭಿಮಾನಿಯ ಜೊತೆಗೆ ಟಿಕ್ ಟಾಕ್ ಮಾಡಿದ್ದಾರೆ.

ಹೌದು, ಇತ್ತೀಚೆಗೆ ಅಭಿಮಾನಿಯೊಬ್ಬರು ಪುನೀತ್ ರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ನಡುವೆ ಅಪ್ಪುರವರ ಜೊತೆ ‘ರಾಜಕುಮಾರ’ ಚಿತ್ರದ ಗೊಂಬೆ  ಹೇಳುತೈತೆ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಅದೇ ವೇಳೆ ಪುನೀತ್ ರವರು ಕೂಡ ಒಂದೆರಡು ಲೈನ್ ಗಳನ್ನು ಹಾಡಿದ್ದಾರೆ. ಈ ವಿಡಿಯೋ ಇದೀಗ ಬಹಳಷ್ಟು ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈಗೀನ ದಿನಗಳಲ್ಲಿ ಟಿಕ್ ಟಾಕ್ ಮಾಡುವುದರಲ್ಲಿಯೇ ಬಹಳಷ್ಟು ಜನರು ಮುಳುಗಿರುತ್ತಾರೆ. ಇದರಿಂದ ಕೆಲವರು ಅವಘಡಗಳನ್ನು ಅನುಭವಿಸಿದ್ದಾರೆ. ಈ ಕಾರಣ ದಯವಿಟ್ಟು ಟಿಕ್ ಟಾಕ್ ಮಾಡುವಾಗ ಆದಷ್ಟು ಜಾಗ್ರತೆವಹಿಸಿರಿ.

ಟಿಕ್ ಟಾಕ್ ವಿಡಿಯೋದಲ್ಲಿ ಟಾಪ್ ಎತ್ತಿ ತೋರಿಸಿದ ಪಾಯಲ್ ರಜಪೂತ್

#balkaninews #tiktock #puneethrajkumar #appuboss #appufans #puneethrajkumartwitter

 

Tags