ಸುದ್ದಿಗಳು

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪವರ್ ಸ್ಟಾರ್

ಕನ್ನಡ ಚಿತ್ರರಂಗದ ಜನಪ್ರಿಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ತಮ್ಮ ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಪುನೀತ್ ಇದೀಗ ಬಿಡುವು ಮಾಡಿಕೊಂಡು ತಿರುಪತಿಗೆ ಭೇಟಿ ನೀಡಿದ್ದಾರೆ.

ನಿನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ತಮ್ಮ ಸ್ನೇಹಿತರ ಜೊತೆಗೂಡಿ ಬರೀ ಗಾಲಿನಲ್ಲಿ ತಿರುಪತಿ ಬೆಟ್ಟವನ್ನು ಹತ್ತಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ಅವರೊಂದಿಗೆ ಸೆಲ್ಪೀ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ ತಿರುಪತಿ ಬೆಟ್ಟ ಹತ್ತಿ ಪೂರ್ಣಗೊಳಿಸಿ, ಇಂದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇದೀಗ ಅಪ್ಪು ತಿರುಪತಿಗೆ  ಭೇಟಿ ನೀಡಿರುವ ಕೆಲವೊಂದಿಷ್ಟು ಫೋಟೊಗಳು ವೈರಲ್ ಆಗಿದ್ದು, ಬಿಳಿ ಶರ್ಟ್, ಬಿಳಿ ಪಂಚೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪುನೀತ್ ರಾಜ್ ಕುಮಾರ್ ‘ಯುವರತ್ನ’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ರಿಲೀಸ್ ಗೂ ಮುನ್ನ ಹೊಸ ದಾಖಲೆ ಬರೆದ ‘ಗೀತಾ’ !!

#puneethrajkumar #sandalwood #tirupathi #tirupathibetta #yuvarathna #Puneethrajkumarfans

Tags