ಸುದ್ದಿಗಳು

ಇಂತಹ ಅಭಿಮಾನಿಗಳು ಇರ್ತಾರಾ..? ಅಪ್ಪು ಶಾಕ್…!!!

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಬಹಳಷ್ಟು ಬಗೆ ಬಗೆಯ ಕಥೆಗಳ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ಅಪ್ಪು ಇಂದು ಚಿತ್ರರಂಗದ ಬಹುಬೇಡಿಕೆಯ ನಟ.  ಯಶಸ್ಸಿನ ಅಲೆಯಲ್ಲಿರುವ ಇವರು ತಮ್ಮ ಮುಂಬರುವ ‘ಯುವರತ್ನ’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ಇತ್ತೀಚೆಗೆ ‘ಯುವರತ್ನ’ ಶೂಟಿಂಗ್ ಗಾಗಿ ಚಿತ್ರತಂಡ ಮೈಸೂರಿಗೆ ತೆರಳಿತ್ತು. ಈ ಸಮಯದಲ್ಲಿ ಪುನೀತ್ ರವರಿಗೆ ಎಂದೂ ಮರೆಯಲಾಗದ ಅಚ್ಚರಿಯೊಂದು ಕಂಡಿದೆ. ಇದರ ಸಲುವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಏನದು ವಿಡಿಯೋ…?

ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ ಯುವರಾಜ ಮಹಾರಾಜ ಕಾಲೇಜ್ ನಲ್ಲಿ ಶೂಟ್ ಮಾಡುತ್ತಿದ್ದೇವು. ಹಲವಾರು ಅಭಿಮಾನಿಗಳು ಬಂದಿದ್ದರೂ ಅವರನ್ನು ಆದಷ್ಟು ಭೇಟಿ  ಮಾಡೋಕೆ ಪ್ರಯತ್ನ ಪಟ್ಟೆವು. ಅದರಲ್ಲಿ ಒಂದಷ್ಟು ಜನಗಳ ಜೊತೆ ಫೋಟೋ ತೆಗೆಸಿಕೊಂಡು.  ಇನ್ನೂ ಕೆಲವರ ಜನ ತೆಗೆಸಿಕೊಳ್ಳೋಕೋ ಸಾಧ್ಯವಾಗಲಿಲ್ಲ.

ಅಭಿಮಾನಿಗಳು ಅಂದರೇ ಎಲ್ಲರೂ ಒಂದೇ. ಎಲ್ಲರಿಗೂ ಒಳ್ಳೆಯದು ಆಗಲಿ. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದೇವು. ವಿಶೇಷವೆಂದರೆ, ಮನೆ ಮುಂದೇನೆ ಕಸ್ತೂರಿ ನಿವಾಸ ಅಂತ ಹೆಸರಿಟ್ಟಿದ್ದನ್ನು ಕಂಡು ಅಪ್ಪು ಅಚ್ಚರಿ ಮೂಡಿಸಿದ್ದಾರೆ. ಮನೆಯಲ್ಲಿ ಇರುವಂತಹ ಜಾಗದಲ್ಲೆಲ್ಲ , ದೇವರ ಕೋಣೇಯಿಂದ ಹಿಡಿದೂ, ಮನೆ ಮುಂದೆ ಇರಬಹುದು, ಮನೆ ಆಚೆ ಇರಬಹುದು. ಎಲ್ಲಾ ಕಡೆಯೂ ತಂದೆಯವರ ಫೋಟೋವೇ ಕಾಣಿಸುತ್ತಿತ್ತು.

ನಮ್ಮ ತಂದೆಯವರ ಅಭಿಮಾನಿಯಾಗಿದ್ದೂ, ಮನೆಯಲ್ಲಿ ಅವರ ಫೋಟೋಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ.. ನಿಮ್ಮ ಪ್ರೀತಿ ವಿಶ್ವಾಸಕ್ಕೆ  ನಾವು ಯಾವಾಗಲೂ ಚಿರಋಣಿ.  ಅಭಿಮಾನಿಗಳೇ ನಮ್ಮ ತಂದೆಯನ್ನು ಬೆಳೆಸಿದ್ದು, ಅವರ ಮೇಲಿಟ್ಟಿದ್ದ ಅದೇ ಪ್ರೀತಿ ಯಾವಾಗಲೂ ನಮ್ಮ ಮೇಲೂ ಇರಲಿ. ಮೈಸೂರು ಹಾಗೂ ಕರ್ನಾಟಕದ ಅಭಿಮಾನಿಗಳಿಗೆ ನಾವು ಸದಾ ಚಿರಋಣಿ ಎಂದು ಪುನೀತ್ ಧನ್ಯವಾದ ತಿಳಿಸಿದ್ದಾರೆ.

 

View this post on Instagram

 

ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೇ ಸದಾ ಚಿರಋಣಿ 🙏

A post shared by Puneeth Rajkumar (@puneethrajkumar.official) on

ಮಹಾನ್ ಕಲಾವಿದ ಶಿವಣ‍್ಣನ ಜನ್ಮದಿನಕ್ಕೆ ಹಲವು ಕಾರ್ಯಕ್ರಮಗಳು

#balkaninews #sandalwood #kannadamovies #puneethrajkumar #puneethrajkumarmovies

Tags