ಸುದ್ದಿಗಳು

ಇನ್ಸ್ಟಾಗ್ರಾಂ ಖಾತೆ ತೆರೆದ ನಟ, ನಿರ್ದೇಶಕ ರಾಘವ ಲಾರೆನ್ಸ್

ಚೆನೈ, ಮೇ.23:

ನಟ ರಾಘವ ಲಾರೆನ್ಸ್ ನಿರ್ದೇಶಕನಾಗಿ, ನಟನಾಗಿ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕಾಂಚನ 3 ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಈ ನಟ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯನ್ನು ಹೊಂದಿದ್ದರು. ಆದರೆ ಇದೀಗ  ಇನ್ಸ್ಟಾಗ್ರಾಂ ಖಾತೆಯನ್ನು ತೆರೆಯುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.

ರಾಘವ ಲಾರೆನ್ಸ್ ಹೊಸ ಖಾತೆ

ಹೌದು,‌ ಸದ್ಯ ಸಾಮಾಜಿಕ‌ ಜಾಲತಾಣಗಳು ಹೆಚ್ಚೆಚ್ಚು ಉಪಯೋಗವಾಗುತ್ತಿದೆ. ಅದರಲ್ಲೀ ಸೆಲಿಬ್ರಿಟಿಗಳಿಗಂತೂ ಅಭಿಮಾನಿಗಳಿಗೆ ನೇರವಾಗಿ ಸಿಗದೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗಾಗಲೇ ಬಹುತೇಕ ಮಂದಿ ಸೆಲಿಬ್ರಿಟಿಗಳು ಅಧಿಕೃತ ಇನ್ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದಾರೆ. ಇದೀಗ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಅಧಿಕೃತ ಇನ್ಸ್ಟಾಗ್ರಾಂ ಖಾತೆ ತೆರೆಯುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಮೊದಲ ಫೋಟೋ ಯಾವುದು ಗೊತ್ತೆ…?

ರಾಘವ ಲಾರೆನ್ಸ್ ಎಂಬ ಅಧಿಕೃತ ಖಾತೆಯನ್ನು ತೆರೆದಿದ್ದಾರೆ ಈ ನಟ. ಸದ್ಯ ಅವರ ಖಾತೆಯಲ್ಲಿ ಮೊದಲ ಫೋಟೋ ತಮ್ಮ ಪ್ರೀತಿಯ ಶ್ವಾನದ ಜೊತೆ ಇರುವ ಹಾಗೂ ಅದರ ಜೊತೆ ಕಾಲ ಕಳೆಯುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನೂ ದೇವರು ಎಲ್ಲಾ ಕಡೆ ಇದ್ದಾನೆ ಎಂದು ಟ್ಯಾಗ್ ಲೈನ್ ಕೊಟ್ಟಿದ್ದಾರೆ. ಸದ್ಯ ಅಭಿಮಾನಿಗಳು ಇನ್ನೂ ಮುಂದೆ ಈ ಖಾತೆಯಲ್ಲಿ ಅಭಿಮಾನಿಗಳು ನಟನನ್ನು ಸಂಪರ್ಕಿಸಬಹುದಾಗಿದೆ.

 

View this post on Instagram

 

God is everywhere

A post shared by Ragava Lawrence (@ragavalawrence_offl) on

ನಿಖಿಲ್ ಗೆಲುವಿಗಾಗಿ ದೇವರ ಮೊರೆ ಹೋದ ಅಭಿಮಾನಿ: 1 ಕೆಜಿ ಬೆಳ್ಳಿ ಹರಕೆ

#balkaninews #kollywood #tamilmovies #raghavalawrence #raghavalawrencemovies

Tags