ಸುದ್ದಿಗಳು

ರಮೇಶ್ ಅರವಿಂದ್ ಅಭಿನಯದ ‘100’ ಚಿತ್ರದ ಶೂಟಿಂಗ್ ಸ್ಟಿಲ್ ವೈರಲ್

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಕಲಾವಿದ ರಮೇಶ್ ಅರವಿಂದ್. ನಟನೆ, ನಿರೂಪಣೆ, ನಿರ್ದೇಶನ ಹೀಗೆ ಹಲವಾರು ವಿಭಾಗಗಳಲ್ಲಿ ತೊಡಗಿಕೊಂಡಿರುವ ರಮೇಶ್ ರವರು ಸದ್ಯ ‘100’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ‘100’ ಚಿತ್ರದಲ್ಲಿ ತೊಡಗಿಕೊಂಡಿರುವ ರಮೇಶ್ ರವರು ಶೂಟಿಂಗ್ ಸ್ಟಿಲ್ ನಲ್ಲಿ ಪಾಲ್ಗೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  

ಹೌದು, ಇತ್ತೀಚೆಗಷ್ಟೇ ಮೂಹೂರ್ತ ಮಾಡಿಕೊಂಡಿದ್ದ ‘100’ ಚಿತ್ರ. ಇದೀಗ ಶೂಟಿಂಗ್ ಸ್ಟಿಲ್ ವೊಂದು ಬಿಡುಗಡೆಯಾಗಿದೆ. ರಮೇಶ್ ಅರವಿಂದ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ರಚಿತಾ ರಾಮ್ ಹಾಗೂ ಪೂರ್ಣರವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

ಸದ್ಯ ರಮೇಶ್ ‘ಶಿವಾಜಿ ಸುರತ್ಕಲ್’ ಹಾಗೂ ‘ಭೈರಾದೇವಿ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಇವರ ನಿರ್ದೇಶನದ ‘ಬಟರ್ ಪ್ಲೈ’ ರಿಲೀಸ್ ಗೆ ರೆಡಿಯಾಗಿದೆ. ಅಂದ ಹಾಗೆ ರಚಿತಾ ರಾಮ್ ಹಾಗೂ ರಮೇಶ್ ಅರವಿಂದ್ ಈ ಹಿಂದೆ ‘ಪುಷ್ಕಕ ವಿಮಾನ’ ಚಿತ್ರದಲ್ಲಿ ನಟಿಸಿದ್ದರು. ಆದರೆ, ಒಟ್ಟಿಗೆ ತೆರೆಯನ್ನು ಹಂಚಿಕೊಂಡಿರಲಿಲ್ಲ. ಇದೀಗ ಪುನಃ ಒಂದಾಗಿ, ತೆರೆಯನ್ನು ಹಂಚಿಕೊಳ್ಳುತ್ತಿರುವುದು ವಿಶೇಷದ ಸಂಗತಿ.

ಬೆಳ್ಳಂಬೆಳಗ್ಗೆ ನಿರಾಶರಾದ ಅಮಲಾ ಪೌಲ್ ಅಭಿಮಾನಿಗಳು!

#balkaninews #ramesharavind #100kannadamovie #sandalwood #ramesharavindandrachitharam #ramesharavindandpoorna

 

Tags