ಸುದ್ದಿಗಳು

ನಟಿ ವಿಜಯಲಕ್ಷಿ ವಿರುದ್ಧ ದೂರು ನೀಡಿದ ನಟ ರವಿ ಪ್ರಕಾಶ್….!!!

ಬೆಂಗಳೂರು, ಮಾ.23:

ನಟಿ ವಿಜಯಲಕ್ಷ್ಮಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಹಾಯಕ್ಕೆ ಅಂಗಲಾಚಿದ್ದರು. ಹಾಗಾಗಿ ನಟ ರವಿ ಪ್ರಕಾಶ್ ಇವರಿಗೆ ಒಂದು ಲಕ್ಷ ಹಣ ಸಹಾಯ ಮಾಡಿದ್ದರು. ಇದೀಗ ಹಣ ವಾಪಸ್ ಮಾಡ್ತೇನೆ ಎಂದು ವಂಚಿಸಿದ್ದಾರೆಂದು ಈ ನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಾಕ್ಷಿ ಮುಂದಿಟ್ಟ ನಟ

ಹೌದು, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈ ನಟ ವಿಜಯಲಕ್ಷ್ಮಿ ಹಾಗೂ ಅವರ ಸಹೋದರಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಸದ್ಯ ಈ ಬಗ್ಗೆ ವಿಡಿಯೋದಲ್ಲೂ ಈ ನಟ ಎಲ್ಲ ಸಾಕ್ಷಿ ಆಧಾರಗಳನ್ನು ಮುಂದಿಟ್ಟಿದ್ದಾರೆ. ಇನ್ನೂ ಈ ಹಿಂದೆ ಹಣ ಸಹಾಯ ಪಡೆದು ವಿಜಯಲಕ್ಷ್ಮಿ ನನ್ನ ಮಾನ ಹರಾಜು ಹಾಕಿದ್ದಾರೆ. ಇದೀಗ ವಾಪಸ್ ಕೊಡುತ್ತೇನೆಂದು ಹಣ ಪಡೆದು ಕೊಟ್ಟಿಲ್ಲ ಎಂದಿದ್ದಾರೆ.

14 ನಿಮಿಷದ ವಿಡಿಯೋ ಅಪ್ಲೋಡ್

ಸದ್ಯ ಈ ವಿಚಾರವಾಗಿ 14ನಿಮಿಷದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಈ ನಟ. ಇನ್ನೂ ಈ ವಿಡಿಯೋದಲ್ಲಿ ಮೊದಲಿನಿಂದ ಏನೆಲ್ಲಾ ಆಯ್ತೋ ಅದೆಲ್ಲದರ ವಿವರಣೆಯನ್ನು ಸಾಕ್ಷಿ ಸಮೇತವಾಗಿ ಈ ನಟ ಮಾಧ್ಯಮದ ಮುಂದಿಟ್ಟಿದ್ದಾರೆ. ಋಣದ ಬಗ್ಗೆ ಮಾತನಾಡುತ್ತಾರೆ ಆದರೆ ಇದೀಗ ಇವರು ಮಾಡಿದ್ದು ಏನು. ವಿಡಿಯೋ ಮೂಲಕ ಎಲ್ಲವನ್ನು ಮಾತನಾಡುತ್ತಾರೆ ಆದರೆ ಇವರು ಮಾಡಿದ್ದು ಏನಾಗಿದೆ. ಇದೆಲ್ಲರ ಸಾಕ್ಷಿ ಮುಂದಿಟ್ಟಿದ್ದೇನೆ. ಎಲ್ಲಾ ಕಾಲ್ ರೆಕಾರ್ಡ್ ಅನ್ನು ಮಾಡಿದ್ದೇನೆ. ಪೊಲೀಸ್ ಠಾಣೆಗೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಕೊನೆಯ ತನಕ ಕೌತುಕ ಕಾಪಾಡಿಕೊಳ್ಳುವ ‘ಉದ್ಘರ್ಷ’

#balkaninews #sandalwood #actresvijayalakshmi #actorraviprakash #kannadamovies #actressvijayalakshmihospitalized

Tags