ಸುದ್ದಿಗಳು

ಕಿಚ್ಚನ ಮನೆಯಲ್ಲಿ ಸಲ್ಮಾನ್ ಖಾನ್: ಸುದೀಪ್ ಗೆ ಗಿಫ್ಟ್ ನೀಡಿದ ಸಲ್ಲು

ಕಳೆದ ಶುಕ್ರವಾರ ದೇಶಾದ್ಯಂತ ತೆರೆ ಕಂಡಿರುವ ‘ದಬಾಂಗ್-3’ ಚಿತ್ರವು ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡುತ್ತಿದೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್ ಖದರ್ ತೋರಿಸಿದರೆ, ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ.

ಈ ಇಬ್ಬರು ಸ್ಟಾರ್ ಗಳು ನಟಿಸಿರುವ ‘ದಬಾಂಗ್-3’ ಎಲ್ಲರಿಗೂ ಇಷ್ಟವಾಗಿದೆ. ಇನ್ನು ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಚಿತ್ರದ ಪ್ರಚಾರಕ್ಕಾಗೊ ಬೆಂಗಳೂರಿಗೆ ಭೇಟಿ ನೀಡಿದ್ದು ಎಲ್ಲರಿಗೂ ತಿಳಿದೇ ಇದೆ. ಇನ್ನು ಬೆಂಗಳೂರಿನಿಂದ ಮುಂಬೈಗೆ ವಾಪಸ್ ಆಗುವ ಮುನ್ನ ಸುದೀಪ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು.

ಇದೀಗ ಸುದೀಪ್, ತಮ್ಮ ಇನ್ ಸ್ಟಾಗ್ರಾಮ್ ನಲ್ಲೊಂದು ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುದೀಪ್ ಜಾಕೇಟ್ ಹಾಕಿಕೊಂಡಿದ್ದು, ಬೆನ್ನು ತೋರಿಸ್ತಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಅಪ್ಪಿಕೊಂಡಿದ್ದಾರೆ. ಅಂದ ಹಾಗೆ ಈ ಜಾಕೆಟ್ ಅನ್ನು ಸಲ್ಲುಬಾಯ್ ಗಿಫ್ಟ್ ಮಾಡಿದ್ದು, ಇದು ಸ್ನೇಹದ ಕಾಣಿಕೆಯಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಹಾಲಿಡೇ ಮೂಡ್ ನಲ್ಲಿ ಕಾಜಲ್ ಅಗರ್ ವಾಲ್

#SalmanKhan #Sudeep  #Dagangg-3  #KannadaSuddigalu

Tags