ಸುದ್ದಿಗಳು

ಬಾಲಿವುಡ್ ಬ್ಯಾಡ್ ಬಾಯ್ ಸೆಕ್ಯುರಿಟಿಗೆ ಹೊಡೆದ್ರಾ..!!?!!: ವಿಡಿಯೋ ನೋಡಿ ಇಲ್ಲಿದೆ

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ‘ಭಾರತ್’ ಸಿನಿಮಾ ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇದೆ‌. ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಲ್ಮಾನ್ ಖಾನ್ ಅವರ ಪಾತ್ರ ಹಾಗೂ ನಟನಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಇದೀಗ ಸಲ್ಲು ಮೇಲೊಂದು ಆರೋಪ ಕೇಳಿ ಬಂದಿದೆ. ಸಲ್ಲು ಅಂಗರಕ್ಷಕರೊಬ್ಬರಿಗೆ ಹೊಡೆದಿದ್ದಾರಂತೆ.

ಹೊಡೆದಿದ್ದಾದರೂ ಯಾಕೆ..?

ಹೌದು, ಈ ನಟನ ಸಿನಿಮಾ ಬಿಡುಗಡೆ ಮುನ್ನ ವಿಶೇಷ ಪ್ರದರ್ಶನದ ವೇಳೆ ಸೆಲಿಬ್ರಿಟಿಗಳು ಹಾಗೂ ಕೆಲವೊಬ್ಬ ಅಭಿಮಾನಿಗಳು, ಸಲ್ಲು ಆಗಮಿಸಿದ್ದರು. ಸಲ್ಲುಗೆ ಸಾಮಾನ್ಯವಾಗಿ ಅಭಿಮಾನಿ ಬಳಗ ದೊಡ್ಡದಿದೆ. ಸಲ್ಲು ಬಾಯ್ ಅಂದರೆ ಸಾಕು ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಲ್ಲು ಆಗಮಿಸುತ್ತಿದ್ದಂತೆ ಅಭಿಮಾನಿಯೊಬ್ಬರು ಸಲ್ಲು ಬಳಿಗೆ ಬಂದಿದ್ದಾರೆ. ಈ ವೇಳೆ ಸಲ್ಲು ಬಾಡಿ ಗಾರ್ಡ್ ಸಲ್ಲು ಬಳಿ ಅಭಿಮಾನಿಯನ್ನು ಬಿಡದೇ ತಳ್ಳಿದ್ದಾರೆ‌. ಈ ವೇಳೆ ಕೋಪಗೊಂಡ ಸಲ್ಲು ಸೆಕ್ಯುರಿಟಿ ಗಾರ್ಡನ್ ಕೆನ್ನೆಗೆ ಹೊಡೆದಿದ್ದಾರೆಂದು ವರದಿಯಾಗಿವೆ. ಸದ್ಯ ಈ ಘಟನೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಅಭಿಮಾನಿಗಳ ಮೇಲೆ ಸಲ್ಲು ಪ್ರೀತಿ

ಸದ್ಯ ವಿವಾದಗಳಿಗೂ ಸಲ್ಲುಗೂ ಬಹಳಷ್ಟು ಅವಿನಾಭಾವ ಎನ್ನುವುದು ಹಲವಾರು ಮಂದಿಯ ಮಾತು. ಬಹು ಕಾಲದಿಂದಲೂ ಈ ಘಟನೆಗಳು ಮರುಕಳಿಸಿವೆ. ಆದರೆ ಅಭಿಮಾನಿಗಳ ಮೇಲಿನ ಸಲ್ಲು ಪ್ರೀತಿಗೆ ಹಲವಾರು ಮಂದಿ ಜೈ ಎಂದಿದ್ದಾರೆ. ಸದ್ಯ ಸಲ್ಲು ನಟನೆಯ ಭಾರತ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕೊನೆಗೂ ತಾಯ್ತನದ ಬಗ್ಗೆ ಮನಬಿಚ್ಚಿ ಮಾತನಾಡಿದ ದೀಪಿಕಾ ಪಡುಕೋಣೆ

#salmankhan #salmankhanmovies #salmankhaninstagram #salmankhanfans

Tags