ವೈರಲ್ ನ್ಯೂಸ್ಸುದ್ದಿಗಳು

ಕರಾಟೆ ಕಿಂಗ್ ಶಂಕರ್ ನಾಗ್ ಅಭಿಮಾನಿಯ ಅಭಿಮಾನದ ಕಥೆ

ಇಂದು ನಟ, ನಿರ್ದೇಶಕ ಕರಾಟೆ ಕಿಂಗ್ ದಿ. ಶಂಕರ್ ನಾಗ್ ಅವರ ಜನುಮದಿನ. 09 ನವೆಂಬರ್ 1954 ರಂದು  ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇಂದು ಇವರು ನಮ್ಮ ಜೊತೆಗೆ ಇಲ್ಲದಿದ್ದರೂ ಮಾನಸಿಕವಾಗಿ ಜೊತೆಯಾಗಿದ್ದಾರೆ.

ಅಂದ ಹಾಗೆ ಶಂಕರ್ ನಾಗ್ ರವರು ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಬರೀ ಸಿನಿಮಾ ಮಾತ್ರವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳ ಮೂಲಕವೂ ಗಮನ ಸೆಳೆದಿದ್ದ ಶಂಕರ್, ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು.

ಇನ್ನು ಇವರನ್ನು ನೆನೆಪಿಸಿಕೊಳ್ಳದ ಅಭಿಮಾನಿಗಳೇ ಇಲ್ಲ ಎನ್ನಬಹುದು. ವಿಶೇಷವೆಂದರೆ ಇವರ ಅಭಿಮಾನಿಯೊಬ್ಬ ಸೈಕಲ್ ಜಾಥಾವನ್ನು ನಿರಂತರ 14 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಸುಮಾರು 80 ಕಿ.ಮೀ ಸುತ್ತುವ ಮೂಲಕ ಸೈಕಲ್ ಜಾಥಾ ಮಾಡುವ ಇವರು ಸೈಕಲ್ ಗೆ ಶಂಕರ್ ನಾಗ್ ಅವರ ಫೋಟೋ ಮತ್ತು ಕನ್ನಡದ ಧ್ವಜವನ್ನು ಇಟ್ಟುಕೊಂಡಿದ್ದು, ಪ್ರತಿ ಶಂಕರ್ ನಾಗ್ ಬರ್ತಡೇಯ ದಿನ ಇಡೀ ಬೆಂಗಳೂರನ್ನು ಸುತ್ತುತ್ತಾರೆ. ಇದಕ್ಕೆ ಹೇಳೋದು ಅಭಿಮಾನಿಗಳೇ ದೇವರು ಎಂದು.

ಸಾವನ್ನಪ್ಪಿದ ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಡಿ-ಬಾಸ್ ದರ್ಶನ್

#ShankarNag #ShankarNagBirthday #ShankarNagFan #SandalwoodMovies  ‍#kannadaSuddigalu

Tags