ಸುದ್ದಿಗಳು

‘ಭರಾಟೆ’ ಬಳಿಕ ಹೆಚ್ಚಾಯ್ತು ಶ್ರೀಮುರುಳಿ ಸಂಭಾವನೆ: ಒಂದು ಚಿತ್ರಕ್ಕೆ ಎಷ್ಟು ಕೋಟಿ ಗೊತ್ತಾ..?

ಕ್ಲಾಸ್ ಆ್ಯಂಡ್ ಮಾಸ್ ಹೀರೋ ಆಗಿರುವ ಶ್ರೀಮುರುಳಿ ಅಭಿನಯದ ‘ಭರಾಟೆ’ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮಾಡಿ ಮುನ್ನುಗ್ಗುತ್ತಿದೆ. ವಿಶೇಷವೆಂದರೆ ಇದೀಗ ಇವರ ಡಿಮ್ಯಾಂಡ್ ಸಹ ಹೆಚ್ಚಾಗಿದೆ.

ಅಂದ ಹಾಗೆ ಶ್ರೀಮುರುಳಿ ಇದೀಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದರೆ ತಪ್ಪಾಗುತ್ತದೆ. ಬದಲಿಗೆ ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಅವರಿಗೆ ಅಧಿಕ ಮೊತ್ತದ ಸಂಭಾವನೆ ಕೊಡಲು ಆಫರ್ ನೀಡಿದೆ.

ಹೌದು, ತೆಲುಗಿನ ನಿರ್ಮಾಣ ಸಂಸ್ಥೆಯು ಇದೀಗ ಶ್ರೀಮುರುಳಿ ಅವರಿಗೆ 7 ಕೋಟಿ ಸಂಭಾವನೆ ನೀಡಲು ಮುಂದಾಗಿದೆ. ಆದರೆ, ಬರೀ ಒಂದು ಚಿತ್ರಕ್ಕಲ್ಲ, ಬದಲಿಗೆ ಅವರೊಂದಿಗೆ 3 ಸಿನಿಮಾ ಮಾಡಲು ಮುಂದಾಗಿದೆ. ಹೀಗಾಗಿ ಒಂದೊಂದು ಚಿತ್ರಕ್ಕೂ 7 ಕೋಟಿ ಸೇರಿದಂತೆ ಮೂರು ಚಿತ್ರಕ್ಕೆ ಬರೋಬ್ಬರಿ 21 ಕೋಟಿ ರೂಪಾಯಿ ನೀಡಲು ಮುಂದಾಗಿದೆ.

ಮೂಲಗಳ ಪ್ರಕಾರ ಶ್ರೀಮುರುಳಿ ಒಂದು ಚಿತ್ರಕ್ಕೆ 3 ರಿಂದ 4 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಈಗ ಒಂದು ಚಿತ್ರಕ್ಕೆ 7 ಕೋಟಿ ನೀಡಲು ಆ ಸಂಸ್ಥೆ ಸಿದ್ದವಾಗಿದೆ. ಸದ್ಯ ಈ ಕುರಿತು ಮಾತುಕಥೆಗಳು ನಡೆಯುತ್ತಿವೆ. ಎಲ್ಲಾ ಒಪ್ಪಿಗೆಯಾದರೆ ಈ ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರಲಿದೆ.

ಇನ್ನು ‘ಭರಾಟೆ’ ಚಿತ್ರದ ಬಳಿಕ ಶ್ರೀಮುರುಳಿ ‘ಮದಗಜ’ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ‘ಅಯೋಗ್ಯ’ ಖ್ಯಾತಿಯ ಮಹೇಶ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅಂದ ಹಾಗೆ ಈ ಚಿತ್ರವು ಇದೇ ತಿಂಗಳ 28ಕ್ಕೆ ಶುರು ಆಗುತ್ತಿದೆ.

ಬಾಲ ನಟನಿಗೆ ‘ಆ’ ಪದ ಸಂಬೋಧಿಸಿದಕ್ಕೆ ಸ್ವರಾಗೆ ನೆಟ್ಟಿಗರಿಂದ ತರಾಟೆ

#ShreeMurali #ShreeMuraliMovie #Bharaate  #Madagaja #SandalwoodMovies  ‍#kannadaSuddigalu

Tags