ಸುದ್ದಿಗಳು

ಕಾಡು ಪ್ರಾಣಿಗಳ ಸಂರಕ್ಷಣೆಗಾಗಿ ಬಂಡಿಪುರಕ್ಕೆ ಹೊರಟ ರೋರಿಂಗ್ ಸ್ಟಾರ್

ಕರ್ನಾಟಕ ರಾಜ್ಯ ಸರ್ಕಾರವು ಈ ವರ್ಷದ ‘ವನ್ಯಜೀವಿ ಸಂರಕ್ಷಣಾ’ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರನ್ನು ಆಯ್ಕೆ ಮಾಡಿತ್ತು. ಇಷ್ಟು ದಿನಗಳ ಕಾಲ ಅವರು ‘ಭರಾಟೆ’ ಚಿತ್ರಕ್ಕಾಗಿ ಬ್ಯುಸಿಯಾಗಿದ್ದರು.

ಸದ್ಯ ‘ಭರಾಟೆ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಅವರು ಇದೀಗ ಬಂಡಿಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಅರು ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

‘ಸದ್ಯ ವನ್ಯಜೀವಿ ಸಂರಕ್ಷಣಾ ಅಭಿಯಾನ ಶುರುವಾಗಿದ್ದು, ಈ ಒಂದು ಕೆಲಸವನ್ನು ದೇವರ ಕೆಲಸವೆಂದು ನಂಬಿದ್ದು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ನಾನು ಬಂಡೀಪುರಕ್ಕೆ ಹೊರಟಿದ್ದೇನೆ. ಇಂದು ನಾವು ಕಾಡನ್ನು ಸಂರಕ್ಷಿಸಿದರೆ ನಮ್ಮ ನಾಡು ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಈ ನಿಟ್ಟಿನಲ್ಲಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಬಂಡೀಪುರಕ್ಕೆ ಹೊರಟಿದ್ದೇನೆ’ ಎಂದು ಈ ಕುರಿತಂತೆ ಅವರು ಒಂದು ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್

#ShriMuruli #ShriMuruliMovie #Bharaate  #ForestSaveCampaign #BandipuraForest

Tags