ಸುದ್ದಿಗಳು

‘ತಪ್ಪಾಗಿದ್ದರೆ ಕ್ಷಮಿಸಿ, ತಿದ್ದಿಕೊಳ್ತಿವಿ’ ಎಂದ ನಟ ಶ್ರೀಮುರುಳಿ

ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿದ್ದ ‘ಭರಾಟೆ’ ಚಿತ್ರವು ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೇ ವೇಳೆ ಚಿತ್ರತಂಡದವರು ಚಿತ್ರದ ಸಕ್ಸಸ್ ಪ್ರೇಸ್ ಮೀಟ್ ಮಾಡಿದ್ದರು.

ಈ ವೇಳೆ ಮಾತನಾಡಿದ ಶ್ರೀಮುರುಳಿ ಎಲ್ಲರಿಗೂ ಧನ್ಯವಾದಗಳನ್ನು ಈ ರೀತಿಯಾಗಿ ತಿಳಿಸಿದರು, ‘ನಮ್ಮ ಚಿತ್ರದ ಯಶಸ್ಸನ್ನು ಪ್ರೇಕ್ಷಕರಿಗೆ ಅರ್ಪಿಸುತ್ತೇನೆ. ಹಾಗೆಯೇ ಮಾದ್ಯಮದವರಿಗೂ ಧನ್ಯವಾದಗಳು. ನಮ್ಮ ಚಿತ್ರಕ್ಕೆ ಒಳ್ಳೆಯ ಪ್ರಶಂಸೆಯ ಮಾತುಗಳು ಬರುತ್ತಿವೆ. ಖುಷಿಯಾಗುತ್ತಿದೆ. ಆದಷ್ಟು ಬೇಗ ಒಳ್ಳೆಯ ಸಿನಿಮಾ ಮೂಲಕ ಮತ್ತೆ ಬರುತ್ತೇನೆ.

ಸದ್ಯ ‘ಮದಗಜ’ದ ತಯಾರಿ ನಡೆಯುತ್ತಿದೆ. ಒಂದು ವೇಳೆ ಎಲ್ಲಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ, ಅದನ್ನು ತಿದ್ದಿಕೊಂಡು ಮುಂದಕ್ಕೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡ್ತಿನಿ. ಒಳ್ಳೆಯ ಸಿನಿಮಾ ಕೊಡುವುದಕ್ಕೆ ಖಂಡಿತಾ ಪ್ರಯತ್ನಿಸುತ್ತೇನೆ’.

ಅಂದ ಹಾಗೆ ‘ಭರಾಟೆ’ ಚಿತ್ರವನ್ನು ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶಿಸಿದ್ದು, ಶ್ರೀ ಲೀಲಾ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್ ಸಹೋದರರು ಸೇರಿದಂತೆ ನೂರಕ್ಕೂ ಹೆಚ್ಚಿನ ಕಲಾವಿದರು ನಟಿಸಿದ್ದು, ಸದ್ಯ ಚಿತ್ರವು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಕನ್ನಡದಲ್ಲಿ ಟ್ವೀಟ್ ಮಾಡಿದ ಸಲ್ಲು ಭಾಯ್, ಫ್ಯಾನ್ಸ್ ಫಿದಾ !

#Sriimurali #Srii muraliBharaate  #Bharaate  #Filmnews #KannadaSuddigalu

Tags