ಸುದ್ದಿಗಳು

ಚರ್ಚೆಗೆ ಒಳಗಾಗಿದ್ದ ಟ್ವೀಟ್ ಬಗ್ಗೆ ಸುದೀಪ್ ಪ್ರತಿಕ್ರಿಯೆ

ಮೊನ್ನೆಯಷ್ಟೇ ನಟ ಕಿಚ್ಚ ಸುದೀಪ್ ಮಾಡಿದ್ದ ಟ್ವೀಟ್ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಟ್ವೀಟ್ ಮೂಲಕ ಅವರು ಯಾರಿಗೆ ಟಾಂಗ್ ಕೊಟ್ಟಿರಬಹುದು ಎನ್ನುವ ಕುತೂಹಲ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಸಾಮಾನ್ಯವಾಗಿ ಸುದೀಪ್ ತಮ್ಮ ಸಿನಿಮಾ ವಿಷಯಗಳು, ಚಿತ್ರರಂಗದ ವಿಷಯಗಳ ಕುರಿತಾಗಿ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳು ಮತ್ತು ಸಿನಿಪ್ರಿಯರ ಜೊತೆ ಅನಿಸಿಕೆ-ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಆದರೆ, ಇತ್ತಿಚೆಗೆ ಅವರು ಮಾಡಿರುವ ಟ್ವೀಟ್ ಎಲ್ಲರಿಗೂ ಭಾರಿ ಅಚ್ಚರಿ ಉಂಟುಮಾಡಿತ್ತು.

“ನನ್ನದೊಂದು ಟ್ವೀಟ್ ಈ ಮಟ್ಟಕ್ಕೆ ಚರ್ಚೆಯಾಗುತ್ತಿದೆ ಎಂದರೆ ನಾನು ಬೆಳೆದಿದ್ದೀನಿ ಅಂತಾ ಅನಿಸುತ್ತಿದೆ. ಹಾಗೇಯೇ ನಾನು ಬೆಳೆಯುವುದಕ್ಕೆ ಇಷ್ಟು ವರ್ಷ ಬೇಕಾಯಿತಾ ಅಂತಾ ಮತ್ತೊಂಡೆದೆ ಅನಿಸುತ್ತಿದೆ. ನನ್ನ ಟ್ವೀಟ್ ನೀವು ಸೀರಿಯಸ್ ಆಗಿ ತೆಗೆದುಕೊಂಡಿದ್ದೀರಿ, ಆ ಟ್ವೀಟ್‍ ಗೆ  ಗೌರವ ನೀಡಿದ್ದೀರಿ ಎಂಬುದು ಅಷ್ಟೇ ಅರ್ಥ’’ ಎಂದಿದ್ದಾರೆ ಸುದೀಪ್.

‘ಇನ್ನು ನಾನು ಯಾವತ್ತೂ ಕೆಟ್ಟ ಸಂದೇಶ ಕೊಡುವುದಿಲ್ಲ. ರಾತ್ರಿಯಾದರೆ ಎಲ್ಲರೂ ಕೂತುಕೊಂಡು ಚಂದ್ರ ನೋಡುತ್ತಿದ್ದರೆ, ಒಬ್ಬರಿಗೆ ಒಂದೊಂದು ರೀತಿಯಲ್ಲಿ ಚಂದ್ರ ಕಾಣುತ್ತದೆ. ನಿಮಗೆ ಖುಷಿಯಾದರೆ ಚಂದ್ರನನ್ನು ನೋಡಿದರೆ ಖುಷಿಯಾಗುತ್ತದೆ. ದುಃಖವಾದಾಗ ಚಂದ್ರನನ್ನು ನೋಡಿದರೆ ನಿಮಗೆ ದುಃಖವಾಗುತ್ತದೆ. ಹೊಸದಾಗಿ ಮದುವೆ ಆದವರಿಗೆ ಚಂದ್ರ ಒಂದೊಂದು ರೀತಿ ಕಾಣಿಸುತ್ತಾನೆ’ ಎಂದು ಸುದೀಪ್ ಮತ್ತೊಮ್ಮೆ ತಮ್ಮ ಟ್ವೀಟ್ ಕುರಿತು ಒಗಟಾಗಿ ಮಾತನಾಡಿದ್ದಾರೆ.

ಟೈಟಲ್ ಸಾಂಗ್ ಮೂಲಕ ಭಾರತೀಯ ಸೈನ್ಯಕ್ಕೆ ಗೌರವ ಸಲ್ಲಿಸಿದ ‘ಸರಿಲೇರು ನಿಕೇವರು’ ಚಿತ್ರತಂಡ

#actorsudeep #sudeeptweet #tweetissue #kannadafilm, #kannadamovie,

Tags