ಸುದ್ದಿಗಳು

ವಿಶೇಷ ಚೇತನ ಅಭಿಮಾನಿಯ ಪ್ರೀತಿಗೆ ಭಾವುಕರಾದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಕಾರ್ಯಕ್ರಮ ಮತ್ತು ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಬಿಡುವು ಮಾಡಿಕೊಂಡ ಅವರು ತಮ್ಮ ವಿಶೇಷ ಚೇತನ ಅಭಿಮಾನಿಯನ್ನು ಭೇಟಿ ಮಾಡಿ ಭಾವುಕರಾಗಿದ್ದಾರೆ.

ವಿಶೇಷ ಚೇತನ ಬಾಲಕಿಯಾಗಿರುವ ದೀಪಿಕಾರಿಗೆ ಸುದೀಪ್ ಅಂದ್ರೆ ಪಂಚ ಪ್ರಾಣ. ಅವರನ್ನು ನೋಡದೆ ಅವರೊಂದಿಗೆ ಮಾತನಾಡದೆ ಏನೂ ತಿನ್ನುವುದಿಲ್ಲ ಏನೂ ಕುಡಿಯುವುದಿಲ್ಲ ಎಂದು ಹಠ ಮಾಡಿದ ಕಾರಣ ಅವರನ್ನು ಮಂಗಳೂರಿನಿಂದ ಬೆಂಗಳೂರಿನ ಶೂಟಿಂಗ್ ಸ್ಥಳಕ್ಕೆ ಸುದೀಪ್ ಕರೆಸಿಕೊಂಡು ಭೇಟಿಯಾಗಿದ್ದಾರೆ.

ಇನ್ನು ತಮ್ಮ ಮೆಚ್ಚಿನ ನಟನನ್ನು ನೋಡಿದ ಆ ಬಾಲಕಿ ‘ನಗುತಾ ನಗುತಾ ಬಾಳು ನೀನು ನೂರು ವರುಷ…..’ ಎಂದು ಹಾಡು ಹೇಳುತ್ತಿದ್ದಂತೆ ಸುದೀಪ್ ಭಾವುಕರಾದರು. ಆಗ ‘ಬೇಜಾರು ಆಯಿತಾ ಮಾಮ’ ಎಂದು ಪುಟ್ಟ ಬಾಲಕಿ ಸುದೀಪ್ ಅವರನ್ನು ಕೇಳುತ್ತಾರೆ. ಸುದೀಪ್ ‘ನನಗೆ ಬೇಜಾರು ಆಗಿಲ್ಲ. ನಿಮ್ಮನ್ನ ಭೇಟಿ ಮಾಡಿ ಸಂತೋಷವಾಯಿತು’ ಎಂದು ಹೇಳುತ್ತಾರೆ.

‘ಲಗ್ ಜಾ ಗಲೇ’ ಎಂದು ಹಾಡಿದ 2 ವರ್ಷದ ಪುಟ್ಟ ಬಾಲಕಿ

#Sudeep #SudeepMovies  #SudeepFans #KannadaSuddigalu

Tags