ಸುದ್ದಿಗಳು

ಮೊನ್ನೆ ಸೈಕಲ್, ಇಂದು ಜಾವಾ ಬೈಕ್ ಏರಿದ ಕಿಚ್ಚ ಸುದೀಪ್..!

ಮೊನ್ನೆಯಷ್ಟೇ ‘ಕೋಟಿಗೊಬ್ಬ-3’ ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ಶೂಟಿಂಗ್ ನ ಸ್ಥಳಕ್ಕೆ ನಟ ಕಿಚ್ಚ ಸುದೀಪ್ ಸೈಕಲ್ ಏರಿ ಹೋಗಿದ್ದರು. ಈ ವಿಡಿಯೋ ಸಾಕಷ್ಟು ವೈಲರ್ ಆಗಿತ್ತು. ಇದೀಗ ಅವರು ಸೈಕಲ್ ಬಿಟ್ಟು ಜಾವಾ ಬೈಕ್ ಏರಿದ್ದಾರೆ.

ಇದೇ ತಿಂಗಳ 20 ರಂದು ಸುದೀಪ್ ಮತ್ತು ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-3’ ಚಿತ್ರವು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ನಲ್ಲಿ ನಿರತವಾಗಿದ್ದು, ನಿನ್ನೆ ಮುಂಬೈನಲ್ಲಿ ಚಿತ್ರದ ಪ್ರಮೋಷನ್ ಭರ್ಜರಿಯಾಗಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸುದೀಪ್ ಜಾವಾ ಬೈಕ್ ಏರಿ ಸಂತಸಪಟ್ಟಿದ್ದು, ಸಖತ್ ಆಗಿಯೇ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಂದ ಹಾಗೆ ‘ದಬಾಂಗ್-3’ ಚಿತ್ರವು ಕನ್ನಡದಲ್ಲಿಯೂ ರಿಲೀಸ್ ಆಗುತ್ತಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸದ್ಯ ಸುದೀಪ್ ಸದ್ಯ ಮುಂಬೈನಲ್ಲಿ ‘ಕೋಟಿಗೊಬ್ಬ 3’ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

‘ರಣಹೇಡಿ’ಗೆ ಮನಸೋತ ಮಣ್ಣಿನ ಮಕ್ಕಳು

#Sudeep #SudeepMovies #Dabaang-3  #SandalwoodMovies  ‍#KannadaSuddigalu

Tags