ಸುದ್ದಿಗಳು

ಶೂಟಿಂಗ್ ವೇಳೆ ಅವಘಡ, 13 ಹೊಲಿಗೆಗಳನ್ನು ಹಾಕಿಸಿಕೊಂಡಿರುವ ನಟ ವಿಕ್ಕಿ ಕೌಶಲ್…!!!

ಮುಂಬೈ, ಏ.20:

ನಟ ವಿಕ್ಕಿ ಕೌಶಲ್ ‘ಉರಿ’ ಸಿನಿಮಾ ನಂತರ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಿದ್ದಾರೆ. ಈ ನಟನಿಗೆ ಶೂಟಿಂಗ್ ವೇಳೆ ಅವಘಡ ನಡೆದಿದ್ದು ಗಂಭೀರ ಗಾಯಗಳಾಗಿವೆ. ಈ ನಟ ಹಾರರ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಸಿನಿಮಾ ಸೆಟ್ ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ವಿಕ್ಕಿ ಮುಖಕ್ಕೆ ಗಂಭೀರ ಗಾಯಗಳಾಗಿವೆಯಂತೆ.

ಹಾರರ್ ಸಿನಿಮಾ ವೇಳೆ ದುರಂತ

ವಿಕ್ಕಿ ಕೌಶಲ್, ಭಾನುಪ್ರತಾಪ್ ಸಿಂಗ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಹಡಗಿನಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ವಿಕ್ಕಿ ಹಡಗಿನಲ್ಲಿ ಓಡುವ ವೇಳೆ ಬಾಗಿಲು ತೆರೆಯಬೇಕಿತ್ತಂತೆ. ಆದರೆ ದುರಾದೃಷ್ಟವಶಾತ್ ಬಾಗಿಲು ತೆರೆಯದೆ ಮುರಿದು ಬಿದ್ದಿದೆಯಂತೆ. ಈ ವೇಳೆ ವಿಕ್ಕಿಗೆ ಗಂಭಿರ ಗಾಯಗಳಾಗಿವೆ ಎಂದು ವರದಿಗಳಾಗಿವೆ.

ವಿಕ್ಕಿಗೆ ಅಪಘಾತದಲ್ಲಿ 13 ಹೊಲಿಗೆ

ಇನ್ನೂ  ಈ ದುರಂತದಲ್ಲಿ ಕೌಶಲ್ ಮುಖಕ್ಕೆ ಗಾಯಗಳಾಗಿದ್ದು, ಅವರ ಕೆನ್ನೆಯ ಮೂಳೆ ಫ್ರ್ಯಾಕ್ಚರ್ ಆಗಿದೆಯಂತೆ. ಅಲ್ಲದೇ ಕೆನ್ನೆಗೆ 13 ಹೊಲಿಗೆಗಳನ್ನೂ ಹಾಕಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದ್ದು, ಚೇತರಿಕೆಯ ನಂತರ ವಿಕ್ಕಿ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

‘ನಾರಾಯಣ’ನ ಅವತಾರದ ನಂತರ ‘ಪುಣ್ಯಕೋಟಿ’ಯಾಗಲು ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

#taranadarsh #bollywood #hindimovies #vickykaushal #vickykaushalmovies

Tags