ಸುದ್ದಿಗಳು

ಈ ನಟಿಯ ಜೊತೆ ಅಭಿನಯಿಸಲು ನಾನ್ ರೆಡಿ ಎಂದ ವಿಜಯ್ ದೇವರಕೊಂಡ!

ನಟಿ ಪ್ರಿಯಾಂಕ ಅರುಲ್ ಮೋಹನ್ ಸದ್ಯ ‘ಗ್ಯಾಂಗ್ ಲೀಡರ್’ ಚಿತ್ರದಲ್ಲಿ ನಟ ನಾನಿ ಗರ್ಲ್ ಫ್ರೆಂಡ್ ಆಗಿ ನಟಿಸುತ್ತಿದ್ದಾರೆ. ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ತನ್ನದೇ ಆದ ಛಾಪು ನಟಿಸುತ್ತಿರುವ ಅರುಲ್, ಕನ್ನಡದ ‘ಒಂದ್ ಕಥೆ ಹೇಳ್ಲಾ’ ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದವರು.

ಸದ್ಯ ಅರುಲ್ ಅಭಿನಯದ ‘ಗ್ಯಾಂಗ್ ಲೀಡರ್’ ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದ್ದು, ಚಿತ್ರದ ಚಿತ್ರೀರಣ ಹೈದ್ರಾಬಾದ್ ನಲ್ಲಿ ನಡೆಯುತ್ತಿದೆ. ಆದರೆ ವಿಷಯ ಅದಲ್ಲ, ಈಕೆಯ ಜೊತೆ ನಟಿಸಲು ಟಾಲಿವುಡ್ ಸ್ಟಾರ್ಸ್ ಗಳು ನಾ, ತಾ ಮುಂದು ಎನ್ನುತ್ತಿದ್ದಾರಂತೆ. ಹೌದು ಆ ನಟರು ಯಾರು ಅಂತೀರಾ, ವಿಜಯ್ ದೇವರಕೊಂಡ ಮತ್ತು ಶರ್ವಾನಂದ್.

Image result for priyanka arul mohan

ಹೌದು, ಈ ಇಬ್ಬರೂ ನಟರು ತಮ್ಮ ಮುಂಬರುವ ಚಿತ್ರಗಳಲ್ಲಿ ಪ್ರಿಯಾಂಕ ಅರುಲ್ ಮೋಹನ್ ಜೊತೆ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರಂತೆ. ಆದರೆ ಸಮಸ್ಯೆ ಎಂದರೆ ಪ್ರಿಯಾಂಕ ‘ಗ್ಯಾಂಗ್ ಲೀಡರ್’ ಚಿತ್ರ ಸಂಪೂರ್ಣವಾಗಿ ಮುಗಿಯುವರೆಗೂ ಬೇರೆ ಚಿತ್ರಗಳಲ್ಲಿ ನಟಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ವಿಜಯ್ ದೇವರಕೊಂಡ ಆಕೆಯ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎಂಬ ಮಾತು ಟಾಲಿವುಡ್ ನಿಂದ ಕೇಳಿ ಬರುತ್ತಿದೆ.

ಕ್ರೀಡಾ ಚಿತ್ರದಲ್ಲಿ ರೌಡಿ ಸ್ಟಾರ್!!!

 

#balkaninews #vijyadevarkonda #vijyadevarkonda #priyankaarulmohan #tollywood

Tags