ಸುದ್ದಿಗಳು

ರಾಕಿಂಗ್ ಸ್ಟಾರ್ ಯಶ್ ಗೆ ಸಿದ್ದಶ್ರೀ ಪ್ರಶಸ್ತಿ ಪ್ರಧಾನ

‘ಕೆ.ಜಿ.ಎಫ್’ ಚಿತ್ರದ ಮೂಲಕ ನ್ಯಾಶನಲ್ ಸ್ಟಾರ್ ಆಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಎರಡು ವಿಷಯಗಳಿಗಾಗಿ ಸಂತಸದಲ್ಲಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇಂದು ಅವರ ಪ್ರೀತಿಯ ಮಗಳು ಐರಾಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದು ಅವರಿಗೆ ಸಿದ್ದಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಇಂದು ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ 35ನೇ ಗುರುವಂದನಾ ಮಹೋತ್ಸವದಲ್ಲಿ ಯಶ್ ರಿಗೆ 2019 ನೇ ಸಾಲಿನ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು ಈ ಪ್ರಶಸ್ತಿಯನ್ನು ಡಾ. ಮುರುಘರಾಜೇಂದ್ರ ಮಹಾಸ್ವಾಮಿ ಹಾಗೂ ಕೇಂದ್ರ ಸಚಿವರಾದ ಸುರೇಶ್ ಅಂಗಡಿಯವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿಯು 1 ಲಕ್ಷ ರೂ. 2 ತೊಲೆ ಚಿನ್ನ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.

ಜನ್ಮದಿನದ ಸಂಭ್ರಮದಲ್ಲಿ ಸುಪ್ರಿಂ ಸ್ಟಾರ್ ಶಶಿಕುಮಾರ್

#Yash #YashMovie #AyraYash #SiddashriNationalAward

Tags