ಸುದ್ದಿಗಳು

ಡಾಲಿ ಮೇಲೆ ಸೂರಿ ಕಣ್ಣು, 

ಟಗರು ಸಿನಿಮಾದ ಮೂಲಕ ಸಕ್ಕತ್ ಫ್ಯಾನ್ ಕ್ಲಬ್ ಸಂಪಾದಿಸಿದ ಡಾಲಿ ಅಲಿಯಾಸ್ ಧನಂಜಯ್ ಗೆ ಗೆಲುವಿನ ಹಾರ ಹಾಕಿದ್ರು ನಿರ್ದೇಶಕ ಸೂರಿ. ಟಗರು ಸಿನಿಮಾ ಯಶಸ್ವಿ ನೂರನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರೋವಾಗ್ಲೇ, ಟಗರು ತಂಡದ ಸಹ ನಟರ ಮುಂದಿನ ಸಿನಿಮಾಗಳು ಯಾವುದು ಎಲ್ಲಿ ನಟಿಸ್ತಾರೆ ಅನ್ನೋದು ಎಲ್ಲರ ಪ್ರಶ್ನೆ.

ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. ಸೂರಿ ಮತ್ತು ಡಾಲಿ ಧನು ಮುಂದೇನು ಮಾಡ್ತಾರೆ ಅನ್ನೋ ವಿಷ್ಯ ಬಯಲಾಗಿದೆ. ಟಗರು ಚಿತ್ರಕ್ಕೆ ಬಯಸಿ ಆಯ್ಕೆ ಮಾಡಿಕೊಂಡು ಆ್ಯಕ್ಟ್‌ ಮಾಡಿಸಿ, ಇದು ಧನಂಜಯ್‌ ನ ತಾಕತ್ತು ಅನ್ನೋದನ್ನ ಉದ್ಯಮಕ್ಕೆ ಸಾರಿ ಹೇಳಿದ ಸೂರಿ, ಇದೀಗ ಅದೇ ಧನಂಜಯ್‌ ನ ಇಟ್ಟುಕೊಂಡು, ಎರಡು ಸಿನಿಮಾ ಮಾಡೋ ಪ್ಲಾನ್‌ ಮಾಡಿದ್ದಾರಂತೆ.

ಟಗರು ಚಿತ್ರದಿಂದ ಧನಂಜಯ್‌ ಗೆ ದೊಡ್ಡ ಹೆಸರು ಬಂದಿದೆ. ಧನು ಅನ್ನೋದನ್ನ ಜನ ಮರೆತು ಬಿಟ್ಟು, ಡಾಲಿ ಅನ್ನೋ ಹೊಸ ಹೆಸರು ಕೊಟ್ಟು, ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಎಲ್ಲಿ ನೋಡಿದ್ರು ಡಾಲಿ ಕ್ರೇಜ್‌ ತಾರಕ್ಕೇರಿದೆ. ಇದನ್ನ ನೋಡಿ, ಕೆಲ ನಿರ್ಮಾಪಕರ ಕಡೆಯಿಂದ ಸೂರಿಯವರಿಗೆ ಡಾಲಿ ಜೊತೆಗೆ ಇನ್ನೊಂದು ಪಿಕ್ಟರ್‌ ಮಾಡಿ ಅನ್ನೋ ರಿಕ್ವೆಸ್ಟ್‌ಗಳು . ಸಲಹೆಗಳು ಬಂದಿವೆ. ಜೊತೆಗೆ ಸೂರಿಗೂ ಡಾಲಿ ಪರ್ಫಾರ್ಮೆನ್ಸ್‌ ನೋಡಿ ಆತನ ಕ್ಯಪಾಸಿಟಿ ನೋಡಿ ದಂಗಾಗಿದ್ದಾರೆ. ಅದ್ರಂತೆ, ಸೂರಿ ದೊಡ್ಮನೆ ಹುಡ್ಗ ಪ್ರೊಡ್ಯೂಸರ್‌ ಎಂ.ಗೋವಿಂದು ಅವರೊಟ್ಟಿಗೆ ಒಂದು ಸಿನಿಮಾ ಮತ್ತು ಇನ್ನೊಂದು ಬ್ಯಾನರ್‌ ನಲ್ಲೊಂದು ಸಿನಿಮಾಗೆ ಪ್ಲಾನ್‌ ಮಾಡಿದ್ದಾರಂತೆ.

ಈ ವಿಚಾರ ಧನಂಜಯ್‌ ಗೂ ಕೂಡ ಸರ್ಪೈಸ್‌ ಕೊಟ್ಟಿದೆಯಂತೆ. ಸೂರಿಯವರು ತಮ್ಮ ಮೇಲಿಟ್ಟಿರೋ ಆ ಭರವಸೆಯನ್ನ ಖಂಡಿತ ಈಡೇರಿಸೋ ನಿರೀಕ್ಷೆಯಲ್ಲಿ, ಡಾಲಿ ಪಕ್ಕಾ ತಯಾರಿ ಮಾಡಿಕೊಳ್ತಿದ್ದಾರಂತೆ.

ಸೂರಿ ಕೆಂಡಂಸಂಪಿಗೆ ಸರಣಿ ಚಿತ್ರಗಳನ್ನ ಮಾಡೋದಾಗಿ ಹೇಳಿದ್ದರು, ಪರಿಮಳ ಫಿಲಂ ಫ್ಯಾಕ್ಟರಿ ಬ್ಯಾನರ್‌ನಡಿಯಲ್ಲಿ ಗಿಣಿಮರಿ ಕೇಸ್ ಭಾಗವನ್ನ ಮಾಡಿ ಯಶಸ್ಸು ಕಂಡಿದ್ದರು. ಕಡಿಮೆ ಬಜೆಟ್‌ನಲ್ಲಿ ಸ್ಟಾರ್‌ಗಳಿಲ್ಲದೆ ಹೇಗೆ ಸಿನಿಮಾ ಮಾಡಬಹುದು ಅನ್ನೋದನ್ನ ತೋರಿಸಿದ್ದರು. ಜೊತೆಗೆ ಕೆಂಡಸಂಪಿಗೆಯ ಸರಣಿಯಲ್ಲಿ, ಮುಂದೆ ಕಾಗೆ ಬಂಗಾರ, ಬ್ಲ್ಯಾಕ್‌ ಮ್ಯಾಜಿಕ್‌ ಭಾಗಗಳನ್ನ ಚಿತ್ರೀಕರಿಸೋದಾಗಿಯೂ ಹೇಳಿದ್ದರು. ಆದ್ರೆ ಈ ನಡುವೆ, ದೊಡ್ಮನೆ ಹುಡ್ಗ, ಟಗರು ಸಿನಿಮಾಗಳನ್ನ ಮಾಡಿದ ಸೂರಿ, ಡಾಲಿ ಜೊತೆಗೆ ಇನ್ನೆರಡು ಆಟವಾಡಿ, ನಂತರ ಕೆಂಡಸಂಪಿಗೆ ಸೀಕ್ವೆಲ್‌ ಗೆ ಕೈ ಹಾಕೋ ಯೊಚನೆಯಲ್ಲಿದ್ದಾರೆ. ಅದೇನೇ ಇದ್ರೂ ಸೂರಿ ಡಾಲಿ ಕಾಂಬಿನೇಷನ್‌ನಲ್ಲಿ ಇನ್ನೆರಡು ಸಿನಿಮಾಗಳು ಬರ್ತಿವೆ ಅನ್ನೋ ಸುದ್ದಿ ಸದ್ಯ ಗಾಂಧಿನಗರದಲ್ಲಿ ಅಲೆ ಎಬ್ಬಿಸ್ತಿದೆ ಅಂದ್ರೆ ತಪ್ಪಾಗಲಾರದು

Tags