ಬಾಲ್ಕನಿಯಿಂದಸಂದರ್ಶನಸುದ್ದಿಗಳು

ಇಲ್ಲಿ ಹೀರೋನೂ ನಾನೇ, ವಿಲನೂ ನಾನೇ: ವಿಭಿನ್ನ ರೀತಿಯ ಪಾತ್ರಗಳಿಗೂ ಜೈ ಎಂದ ಯುವ ನಟ ನಿರಂತ್

ನಾಯಕನಾಗಿಯೂ ಸೈ, ವಿಲನ್ ಆಗಿಯೂ ಜೈ

ಬೆಂಗಳೂರು.ಏ.17: ಕೆಲವು ಕಲಾವಿದರಿಗೆ ತಮ್ಮನ್ನು ತಾವು ವಿಭಿನ್ನ ಪಾತ್ರಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸುವ ಅಭಿಲಾಷೆ ಇರುತ್ತದೆ. ಯಾವುದೇ ಪಾತ್ರವಿರಲಿ, ಆ ಪಾತ್ರಕ್ಕೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ. ಹೀಗೆಯೇ ಇಲ್ಲೊಬ್ಬ ನಟರಿದ್ದಾರೆ. ಇವರು ನಾಯಕನಾಗಿಯೂ ಸೈ, ವಿಲನ್ ಆಗಿಯೂ ಜೈ ಎನ್ನುತ್ತಿದ್ದಾರೆ.

ಹೌದು, 2016 ರಲ್ಲಿ ತೆರೆಗೆ ಬಂದಿದ್ದ ವಿನೋದ್ ಕುಮಾರ್ ಆರ್ ನಿರ್ದೇಶನದ ‘ಲೈಫು ಸೂಪರ್’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ನಾಯಕ ನಿರಂತ್. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡದಿದ್ದರೂ ಮೇಕಿಂಗ್ ನಿಂದ ಗಮನ ಸೆಳೆಯಿತು. ಚಿತ್ರದಲ್ಲಿ ಎರಡನೇ ನಾಯಕನಟರಾಗಿ ನಟಿಸಿದ ನಿರಂತ್, ಆನಂತರ ದುನಿಯಾ ರಶ್ಮಿಯೊಂದಿಗೆ ‘ಕಾರ್ನಿ’ ಚಿತ್ರದಲ್ಲಿ ನಟಿಸಿದರು.

ಈ ನಡುವೆ ನಟ ನಿರಂತ್ ತಮಿಳು ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ನಟಿಸಿರುವ ‘ಪುರಾವೆ’ ಚಿತ್ರವು ಬಿಡುಗಡೆಗೆ ತಯಾರಾಗಿದ್ದು, ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಹ ನೀಡಿದ್ದಾರೆ. ಹೌದು, ಇಷ್ಟು ದಿನಗಳ ಕಾಲ ಬರೀ ನಾಯಕನಟರಾಗಿ ವಿಲನ್ ಗಳಿಗೆ ಹೊಡೆದಾಡುತ್ತಿದ್ದವರು, ಇದೀಗ ತಾವೇ ಹೊಡೆತ ತಿನ್ನುವುದಕ್ಕೆ ತಯಾರಾಗಿದ್ದಾರೆ. ಅಂದರೆ, ತಮ್ಮ ನಟನೆಯನ್ನು ತೋರಿಸುವ ಸಲುವಾಗಿ ಅವರು ವಿಲನ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

“ಹೌದು, ನನಗೆ ಕಲಾವಿದನಾಗಿ ನನ್ನ ನಟನೆಯನ್ನು ತೋರಿಸುವ ಅವಕಾಶ ಬೇಕಾಗಿತ್ತು, ಅದಕ್ಕಾಗಿ ಕಾಯುತ್ತಿದೆ , ಆ ಅವಕಾಶ ‘ಕೃಷ್ಣ ಟಾಕೀಸ್’ ಒದಗಿಸಿಕೊಟ್ಟಿತು. ಈ ಚಿತ್ರದಲ್ಲಿ ನಾನು ವಿಲನ್ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ನಾಯಕರಾಗಿ ಕೃಷ್ಣ ಅಜೇಯ್ ರಾವ್ ಇದ್ದಾರೆ. ಚಿತ್ರವನ್ನು’ಓಳ್ ಮುನ್ಸಾಮಿ’ ಖ್ಯಾತಿಯ ಆನಂದ ಪ್ರಿಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ವಿಭಿನ್ನ ಕಥಾಹಂದರವನ್ನು ಒಳಗೊಂಡಿದ್ದು, ನನ್ನ ಪಾತ್ರವೂ ಸಹ ವಿಭಿನ್ನವಾಗಿದೆ” ಎಂದು ಚಿತ್ರದ ಬಗ್ಗೆ ಹಾಗೂ ತಮ್ಮ ಸಿನಿಮಾ ಪಯಣದ ಬಗ್ಗೆ ಹೇಳುತ್ತಾರೆ.

ಮೂಲತಃ ಮಂಡ್ಯದವರಾಗಿ, ಬೆಂಗಳೂರಿನಲ್ಲಿ ನೆಲೆಸಿರುವ ನಿರಂತ್, ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಸಿನಿಮಾರಂಗಕ್ಕೆ ನಿರ್ದೇಶನದ ಕ್ಷೇತ್ರಕ್ಕೆ ಬಂದವರು. ಆದರೆ, ಆಕಸ್ಮಿಕವಾಗಿ ನಟರಾದರು. ಹೀಗೆ ನಟಿಸಿದ ಮೊದಲ ಚಿತ್ರದಲ್ಲಿಯೇ ಗಮನ ಸೆಳೆದರು.

ಸದ್ಯ ನಿರಂತ್ ನಟಿಸುತ್ತಿರುವ ‘ಪುರಾವೆ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಈ ಚಿತ್ರವನ್ನೂ ಸಹ ವಿನೋದ್ ಕುಮಾರ್ ಆರ್ ಅವರೇ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಇವರ ಹ್ಯಾಟ್ರಿಕ್ ಕಾಂಭಿನೇಷನ್ ಆಗಲಿದೆ.

‘ಲೈಫು ಸೂಪರ್’ ಆದ್ಮೇಲೆ ತಮಿಳಿನಲ್ಲಿ ‘ಸಂತೋಶತಿಲ್ ಕಲವಿರಂ’ ಚಿತ್ರದಲ್ಲಿ ನಟಿಸಿದೆ. ನಂತರ ದುನಿಯಾ ರಶ್ಮಿಯೊಂದಿಗೆ ‘ಕಾರ್ನಿ’ಯಲ್ಲಿ ನಟಿಸಿದೆ. ಎಲ್ಲರಿಗು ತಿಳಿದಿರುವಂತೆ ಇದೊಂದು ಕಂಪ್ಲಿಟ್ ಕ್ರೈಂ ಥ್ರಿಲ್ಲರ್ ಸಿನಿಮಾ. ಇಲ್ಲಿ ನಾನು ಆ್ಯಂಟಿ ಹೀರೋ ಆಗಿ , ಅಂದರೆ ಹಿರೋನೂ ನಾನೇ ವಿಲನೂ ನಾನೇ. ಸದ್ಯ ‘ಪುರಾವೆ’ ಚಿತ್ರದಲ್ಲಿ ನಟಿಸಿದ್ದು, ‘ಕೃಷ್ಣ ಟಾಕೀಸ್’ನಲ್ಲಿ ವಿಭಿನ್ನ ರೀತಿಯ ಪಾತ್ರ ಸಿಕ್ಕಿದೆ. ಅಜೇಯ್ ರಾವ್ ಈ ಚಿತ್ರಕ್ಕೆ ಹೀರೋ. ವಿಲನ್ ಆಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ ಮತ್ತು ಅಚ್ಚರಿ’ ಎನ್ನುತ್ತಾರೆ ನಿರಂತ್.

ನೀವು ಹೀರೋ ಆಗಿದ್ದವರು ಏಕೆ ವಿಲನ್ ಆಗಲು ಒಪ್ಪಿಕೊಂಡಿರಿ..? ಎಂಬ ಪ್ರಶ್ನೆಗೆ ನಿರಂತ್ ಖುಷಿಯಿಂದ “ಈ ಪಾತ್ರವನ್ನು ನಾನಾಗಿಯೇ ಒಪ್ಪಿಕೊಂಡಿಲ್ಲಾ. ಅದಾಗದೇ ಬಂತು, ಅದರಲ್ಲೂ ವಿಲನ್ ಆಗಿ ದ್ವಿಪಾತ್ರ. ಹೀಗಾಗಿ ಚಾಲೆಂಜಿಂಗ್ ಅನಿಸ್ತು. ಹಾಗೆಯೇ ಸ್ವಲ್ಪ ಬದಲಾವಣೆ ಬೇಕು ಅನಿಸಿ, ಒಪ್ಪಿಕೊಂಡೆ. ನಾನು ನಿರ್ದೇಶಕರಾಗಲು ಚಿತ್ರರಂಗಕ್ಕೆ ಬಂದೆ, ಆಕಸ್ಮಿಕವಾಗಿ ಹೀರೋ ಆದೆ, ಈಗ ವಿಲನ್ನೂ ಆಗ್ತಿದ್ದೀನಿ. ನಮ್ಮ ‘ಪುರಾವೆ’ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಹಾಗೆಯೇ ಖುಷಿಯಾಗುತ್ತಿದೆ” ಎಂದು ಉತ್ತರಿಸುತ್ತಾರೆ.

ಈ ಮೂಲಕ ಹೀರೋ ಆಗಿದ್ದವನು ವಿಲನ್ ಆಗಿ ಎಂಟ್ರಿ ಕೊಡುತ್ತಿರುವ ನಿರಂತ್, ಅದರಲ್ಲೂ ದ್ವಿಪಾತ್ರದ ವಿಲನ್ ಆಗಿಯೂ ಕಾಣಿಸಿಕೊಳ್ಳಲು ಮುಂದಾಗಿರುವ ನಿರಂತ್ ಅವರಿಗೆ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

‘ಜರ್ಸಿ’ ಚಿತ್ರಕ್ಕೆ ಸೆನ್ಸಾರ್ ಬೋರ್ಡಿನಿಂದ “ಯು” ಸರ್ಟಿಫಿಕೇಟ್!!

#actorniranth, #now, #villion, #balkaniews #filmnews, #kannadasuddigalu, #lifusuper, #karrni,

Tags