ಸುದ್ದಿಗಳು

ಅದಾ ಶರ್ಮಾ ಸೋಲೋ ಟ್ರಿಪ್ ಹೋಗಲು ಇಷ್ಟಪಡುವುದಿಲ್ಲವಂತೆ, ಮತ್ತೆ?

ನಟಿ ಅದಾ ಶರ್ಮಾ ಸೋಲೋ ಟ್ರಿಪ್ ಹೋಗಲು ಇಷ್ಟಪಡುವುದಿಲ್ಲವಂತೆ. ಅದರಲ್ಲೂ ಲಾಂಗ್ ಟ್ರಿಪ್, ವಿಶೇಷವಾದ ಸ್ಥಳಗಳಿಗೆ ಹೋಗುವುದಾದರೆ ಜೊತೆಗೆ ಫ್ರೆಂಡ್ಸ್ ಇರಲೇಬೇಕಂತೆ.

ನಾನು ಅತಿ ಚಿಕ್ಕ ವಯಸ್ಸಿಗೆ ಕೆಲಸ ಆರಂಭಿಸಿದೆ ಎಂದು ಹೇಳುವ ಆದಾ, ಒಮ್ಮೆ ಬೋರ್ಡ್ ಎಕ್ಸಾಂ ಮುಗಿದ ನಂತರ ಬೆಸ್ಟ್ ಫ್ರೆಂಡ್ಸ್ ಜೊತೆ ಗೋವಾ ಟ್ರಿಪ್ ಹೋಗಿದ್ದರಂತೆ. ಅಂದಿನಿಂದ ಅನೇಕ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಅದು ಫ್ರೆಂಡ್ಸ್ ಜೊತೆಗೆ ಮಾತ್ರ ಎಂದು ಹೇಳಿದ್ದಾರೆ.

Image result for adah sharma

ಹಾಗೆಯೇ ಹಾಲಿಡೇ ಬಗ್ಗೆ ನೆನಪು ಮಾಡಿಕೊಳ್ಳುವ ಅದಾ, ” ನಾನು ಹವಾಯಿ ದ್ವೀಪಕ್ಕೆ ಕುಟುಂಬದವರ ಜೊತೆ ಹೋಗಿದ್ದು ಮರೆಯುವುದಕ್ಕೆ ಸಾಧ್ಯವಿಲ್ಲ. ಸಿಂಗಾಪೂರ್ ಗಂತೂ ಹೋಗುತ್ತಲೇ ಇರುತ್ತೇವೆ. ನಾನು 3 ವರ್ಷದವಳಿದ್ದಾಗ ಅಲ್ಲಿನ ನೇಚರ್ ಪಾರ್ಕ್ ಗೆ ಹೋಗಿದ್ದೆವು. ಅಲ್ಲಿನ ಪಕ್ಷಿಗಳು ನೋಡಿ ತುಂಬಾ ಖುಷಿಯಾಗಿತ್ತು” ಎಂದು ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಅದಾ ಹೊಸ ವೆಬ್ ಸಿರೀಸ್ ‘ ದಿ ಹಾಲಿಡೇ’ಯಲ್ಲಿ ನಟಿಸುತ್ತಿದ್ದಾರೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತನ್ನ ಬಾಲ್ಯದ ಸ್ನೇಹಿತರ ಜೊತೆ ಟ್ರಿಪ್ ಹೋಗುವುದು ಚಿತ್ರದ ಸಾರಾಂಶ. ಜೂಮ್ ಸ್ಟುಡಿಯೋಸ್ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಪ್ರೆಗ್ನೆನ್ಸಿ’ ಫೋಟೋಶೂಟ್ ಮಾಡಿಸಿಕೊಂಡ ಸೆಲೆಬ್ರೆಟಿಗಳು !!

#balkaninews #adahsharma #solotrip #holiday #webseries

Tags