ಸುದ್ದಿಗಳು

ಕಾರ್ಮೋಡ ಸರಿಸಲಿರುವ ಅದ್ವಿತಿ ಶೆಟ್ಟಿ

ಬೆಂಗಳೂರು, ಏ.20:

‘ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ‘ಕಾರ್ಮೋಡ ಸರಿದು ಬೆಳಕೂ ಸುರಿದ ಮೇಲೂ..’ ಎಂಬ ಸುಮಧುರ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎಂದೆನಿಸುವುದು ಸಹಜ. ಇದೀಗ ಅದೇ ಹಾಡಿನ “ಕಾರ್ಮೋಡ ಸರಿದು” ಪದಗಳನ್ನು ಇಟ್ಟುಕೊಂಡು ಸಿನಿಮಾ ಶೀರ್ಷಿಕೆ ಮಾಡಲಾಗಿದೆ.

ವಿಶೇಷವೆಂದರೆ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ನಾಯಕಿ ರಾಧಿಕಾ ಪಂಡಿತ್ ಸ್ನೇಹಿತೆಯಾಗಿ ನಟಿಸಿದ್ದ ಅದ್ವಿತಿ ಶೆಟ್ಟಿ ‘ಕಾಮೋಡ ಸರಿದು’ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

Image may contain: 1 person, smiling, flower

ಇದೊಂದು ಕೌಟುಂಬಿಕ ಕಥೆಯ ಹಂದರವುಳ್ಳ ಚಿತ್ರ. ಈಗಿನ  ಕಾಲದಲ್ಲಿ ಸಂಬಂಧಗಳ ಸ್ಥಿತಿ ಹೇಗಿದೆ ಎಂಬ ಅಂಶಗಳನ್ನು ಆಧರಿಸಿ ನಿರ್ದೇಶಕರು ಸಿನಿಮಾ ಮಾಡಿದ್ದಾರೆ’ ಎಂದು ಕಾರ್ಮೋಡ ಸರಿದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಅದ್ವಿತಿ. ಕಾರ್ಮೋಡ ಸರಿದು ಧಾರಾವಾಹಿಯಲ್ಲಿ ಪ್ರಿಯಾ ಎಂಬ ಹೆಸರಿನ ಪಾತ್ರದಲಿ ಅದ್ವಿತಿ ಬಣ್ಣ ಹಚ್ಚಿದ್ದು ಪ್ರಸ್ತುತ ಚಿತ್ರದಲ್ಲಿ ವೈದ್ಯೆಯಾಗಿ ಅದ್ವಿತಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಧಾರಾವಾಹಿಯಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದ ಅದ್ವಿತಿ ಇದೇ ಮೊದಲ ಬಾರಿಗೆ ಸಿನಿಮಾದಲ್ಲೂ ವೈದ್ಯೆಯಾಗಿ ನಟಿಸಿದ್ದಾರೆ.

“ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ಎಲ್ಲಾ ಹಾಡುಗಳು ನನಗೆ ಇಷ್ಟ. ‘ಕಾರ್ಮೋಡ’ ಹಾಡು ನನ್ನ ಸದಾ ಕಾಲದ ಫೇವರಿಟ್ ಹಾಡು. ಇದೀಗ ಅದೇ ಹಾಡಿನ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ” ಎನ್ನುವ ಅದ್ವಿತಿ ಕುದುರೆಮುಖ ಸೇರಿದಂತೆ ಮಲೆನಾಡ ಹಲವು ಕಡೆ ಸಿನಿಮಾದ ಬಹುತೇಕ ಚಿತ್ರೀಕರಣವಾಗಿದೆ. ಇನ್ನೂ ಈ ಚಿತ್ರದಲ್ಲಿ ಮಳೆಯೂ ಪ್ರಧಾನವಾಗಿದ್ದು, ಆಗಸ್ಟ್ ತಿಂಗಳ ಮಳೆಯಲ್ಲಿಯೇ ಶೂಟಿಂಗ್ ಮಾಡಿದ್ದೇವೆ. ಅದೇ ಒಂದು ರೀತಿ ಚಾಲೆಂಜಿಂಗ್’ ಎಂದು ತಮ್ಮ ಪಾತ್ರವನ್ನು ವಿವರಿಸಿದರು ಅದ್ವಿತಿ.

Image may contain: 1 person, smiling, standing, plant and outdoor

ಫ್ಯಾನ್ ಮತ್ತು ಥ್ರಿಲ್ಲರ್ ಶೈಲಿಯ 188 ಸಿನಿಮಾಗಳಲ್ಲಿ ಅಭಿನಯಿಸಿರುವ ಅದ್ವಿತಿ ‘ಸದ್ಗುಣ ಸಂಪನ್ನ ಮಾಧವ’ ಚಿತ್ರದಲ್ಲಿ ರವಿಶಂಕರ್ ಮಗಳಾಗಿ ನಟಿಸುತ್ತಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಉದಯ್ ಎಂಬುವವರು ‘ಕಾರ್ಮೋಡ ಸರಿದು’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಅದ್ವಿತಿಗೆ ಜೋಡಿಯಾಗಿ ಮಂಜು ನಟಿಸಿದ್ದಾರೆ.  ಇಂದು  ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಯಾಗಲಿದೆ. ಇವರ ಈ ಪ್ರಯತ್ನಕ್ಕೆ ಬಾಲ್ಕನಿ ನ್ಯೂಸ್ ಶುಭಕೋರುತ್ತದೆ.Image may contain: 3 people, people smiling, tree, outdoor and nature

ಇಲ್ಲಿ ಹೀರೋನೂ ನಾನೇ, ವಿಲನೂ ನಾನೇ: ವಿಭಿನ್ನ ರೀತಿಯ ಪಾತ್ರಗಳಿಗೂ ಜೈ ಎಂದ ಯುವ ನಟ ನಿರಂತ್

#balkaninews #sandalwood #kannadamovies #AdhvithiShetty #AdhvithiShettymovies #AdhvithiShettyhits #AdhvithiShettyserials

Tags