ಸುದ್ದಿಗಳು

ನಟಿ ಅದಿತಿ ಪ್ರಭುದೇವ ಮದುವೆಯಾಗುವ ಹೀಗಿರಬೇಕು..!

ಕಿರುತೆರೆ ಲೋಕದಿಂದ ಬಂದು ಇಂದು ಚಂದನವನದ ಜನಪ್ರಿಯ ನಟಿ ಎನಿಸಿಕೊಂಡಿರುವವರ ಪೈಕಿ ಒಬ್ಬರು ಅದಿತಿ ಪ್ರಭುದೇವ. ಸದ್ಯ ಇವರು ‘ಬ್ರಹ್ಮಚಾರಿ’, ‘ಒಂಭತ್ತನೇ ಅದ್ಭುತ, ‘ತೋತಾಪುರಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅಂದ ಹಾಗೆ ನಿನ್ನೆ (ನ.15) ‘ಬ್ರಹ್ಮಚಾರಿ’ ಚಿತ್ರದ ಹಾಡನ್ನು ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವುದಾಗಿ ಮಾಧ್ಯಮದವರಿಗೆ ಅದಿತಿ ತಿಳಿಸಿದರು.

‘ನಿಮ್ಮ ಮದುವೆಯಾಗುವ ಹುಡುಗ ಹೇಗಿರಬೇಕು..?’ ಎಂಬ ಪ್ರಶ್ನೆಗೆ, ಮುಗುಳ್ ನಕ್ಕ ಅದಿತಿ, ‘ಎಲ್ಲರಿಗೂ ಮದುವೆಯಾಗಬೇಕೆಂಬ ಕನಸು ಕಾಣ್ತಾರೆ. ಇಲ್ಲಾಂದ್ರೆ ಏನೋ ಒಂಥರಾ ಬದುಕು ಪರಿಪೂರ್ಣ ಅಂತ ಅನಿಸುವುದಿಲ್ಲ. ಒಳ್ಳೆ ಸಂಸ್ಕಾರವಿರುವ ಅದರಲ್ಲೂ ಅಚ್ಚ ಕನ್ನಡದ ಹುಡುಗ ಸಿಕ್ಕರೆ ಖಂಡಿತಾ ಮದುವೆಯಾಗ್ತಿನಿ‘ಎಂದು ತಮ್ಮ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡರು.

‘ಅದು ವಯಕ್ತಿಕ ವಿಡಿಯೋ ಡಿಲಿಟ್ ಮಾಡಿ’ ಎಂದು ರವಿ ಬಸ್ರೂರು ಮನವಿ

#AdithiPrabhudeva #AdithiPrabhudevaMovies #AdithiPrabhudevaMarriage #kannadaSuddigalu

Tags