ಸುದ್ದಿಗಳು

‘ನೆಗೆಟಿವ್ ಕಾಮೆಂಟ್ಸ್ ಗಳಿಗೆ ತಲೆ ಕಡೆಸಿಕೊಳ್ಳಬಾರದು’ ಎಂದ ಅಕ್ಷರಾ ಗೌಡ

ಮಾಡೆಲಿಂಗ್ ಜಗತ್ತಿನಿಂದ ‘ಪಂಚತಂತ್ರ’ ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದ ನಟಿ ಅಕ್ಷರಾ ಗೌಡ ಶೀಘ್ರದಲ್ಲಿಯೇ ಮರ್ಡರ್ ಮಿಸ್ಟ್ರಿಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಸದ್ಯ ಅವರು ವಿಕ್ರಮ್ ರವಿಚಂದ್ರನ್ ಜೊತೆಗೆ ‘ತ್ರಿವಿಕ್ರಮ’ ಚಿತ್ರದಲ್ಲಿ ನಟಿಸುತ್ತಿದ್ದು, ಮತ್ತೊಂದು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಬೋಲ್ಡ್ ಬೆಡಗಿ ಅಕ್ಷರಾ ಗೌಡ, ಹೇಮಂತ್ ಹೆಗ್ಡೆ ನಿರ್ದೇಶನದ ಹೊಸಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಗುರುನಂದನ್ ನಾಯಕನಾಗಿದ್ದು, ಅವರಿಗೆ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹೆಸರಿಡದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ತಿಂಗಳ ಅಂತ್ಯಕ್ಕೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

‘ಕೆಲವು ಕಥೆಗಳು ಇಷ್ಟವಾಗಿದ್ದು, ಅದರ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಇನ್ನು ಹೇಮಂತ್ ಹೆಗ್ಡೆ ಅವರನ್ನು ನಾನು ಇಲ್ಲಿಯವರೆಗೆ ನಟನಾಗಿ ನೋಡಿದೆ. ಈಗ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ.’ ಎನ್ನುತ್ತಾರೆ ಅಕ್ಷರಾ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿರದ ಅಕ್ಷರಾ ಹೀಗೆ ಹೇಳುತ್ತಾರೆ, ‘ಈ ಸೋಷಿಯಲ್ ಮೀಡಿಯಾದಿಂದ ಕೆಲವರು ಜನಪ್ರಿಯರಾಗುತ್ತಾರೆ. ಅದನ್ನೇ ಸ್ಟಾರ್ ಗಿರಿ ಎಂದುಕೊಳ್ಳಬಾರದು. ನಾನಂತೂ ಸಮಚಿತ್ತದಿಂದ ಇರುತ್ತೇನೆ. ರಿಯಲ್ ಲೈಫ್ ನಲ್ಲಿ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ರಿಯಲ್ ಲೈಫ್ ನಲ್ಲಿಕೂಡಾ ನಟರ ಸಾಧನೆಯ ಹಿಂದೆ ತುಂಬಾ ಜನರ ಶ್ರಮ ಇರುತ್ತದೆ. ಹಾಗಿಲ್ಲದೆ ಯಾರೂ ಸ್ಟಾರ್ ಆಗುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ನೆಗೆಟಿವ್ ಕಾಮೆಂಟ್ ಬಗ್ಗೆಯೂ ತಲೆಕೆಡಿಸಿಕೊಳ್ಳಬಾರದು’ ಎಂದಿದ್ದಾರೆ.

ರಾಣು ಮೊಂಡಾಲ್ ಹಾಡಿದ ಸಾಂಗ್ ಟೀಸರ್ ರಿಲೀಸ್!!

#aksharagowda #aksharagowdaMovies #aksharagowdacinemalife  #sandalwoodmovies  ‍#kannadasuddigalu

Tags