ಸುದ್ದಿಗಳು

ಈ ಬಾರಿ ಆಲಿಯಾ ಮತ ಹಾಕೋದಿಲ್ವಾ..?

ಮುಂಬೈ, ಏ.15:

ಸದ್ಯ ಲೋಕ ಸಮರದ ಕಾವು ಜೋರಾಗಿದೆ. ಈಗಾಗಲೇ ಮೊದಲನೇ ಹಂತದ ಚುನಾವಣೆ ಕೆಲವೊಂದು ಕಡೆ ಮುಗಿದಿದೆ. ನರೇಂದ್ರ ಮೋದಿಯವರು ಚುನಾವಣೆ ಪ್ರಕಟಣೆ ಆದ ನಂತರದಲ್ಲಿ ಸೆಲಿಬ್ರಿಟಿಗಳಿಗೆ ಮತದಾನದ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದರು. ಅದೇ ರೀತಿ ಹಲವಾರು ಮಂದಿ ಸೆಲಿಬ್ರಿಟಿಗಳು ಕೂಡ ಮತದಾನದ ಮನವಿ ಮಾಡಿದ್ದರು. ಅದರಲ್ಲಿ ಆಲಿಯಾ ಕೂಡ ಒಬ್ಬರು.

ಮತ ಕೇಳಿದವರೇ ಮತ ಹಾಕಲ್ವಾ..?

ಹೌದು, ಮತ ಹಾಕಿ ಅದು ನಮ್ಮ ಹಕ್ಕು ಅಂತಾ ಟ್ವಿಟ್ಟರ್ ಗಳ ಮೂಲಕ ಸೆಲಿಬ್ರಿಟಿಗಳು ಜಾಗೃತಿ ಕಾರ್ಯಕ್ರಮ ಮಾಡಿದ್ದರು. ನಟಿ ಆಲಿಯಾ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಆದರೆ ಆಲಿಯಾ ಮನವಿ ಮಾಡಿದ್ದರೂ ತಾವೇ ಸ್ವತಃ ಮತದಾನ ಮಾಡುತ್ತಿಲ್ಲ. ಇದಕ್ಕೆ ಕಾರಣ ಕೂಡ ಇದೆಯೆಂದು ಆಲಿಯ ಹೇಳಿರುವುದು ವರದಿಗಳಾಗಿವೆ.

ಪಾಸ್‌ ಪೋರ್ಟ್ ಸಮಸ್ಯೆ..?

ಆಲಿಯಾ ಭಾರತದ ಪೌರತ್ವ ಪಡೆದಿಲ್ಲವಂತೆ. ನಟಿ ಆಲಿಯಾ ಬ್ರಿಟೀಷ್ ಪ್ರಜೆಯಂತೆ. ಇನ್ನೂ ಈ ಬಗ್ಗೆ ಪ್ರಮೋಷನ್‌ ನಲ್ಲಿ ಹೇಳಿರುವ ನಟಿ ಫಾಸ್‌ಪೋರ್ಟ್ ಸಮಸ್ಯೆಯಿಂದ ನಾನು ಮತ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಇದೀಗ ಮತ ಹಾಕಿ ಎಂದವರಿಗೇ ಮತದಾನದ ಹಕ್ಕು ಇಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಗೊಣುಗುತ್ತಿದ್ದಾರೆ.

ನಿಮ್ಮನ್ನ ನಂಬಿ ವೋಟ್ ಮಾಡೋದು ಹೇಗೆ!!?!! – ಸುಮಲತಾಗೆ ಮಂಡ್ಯದ ಜನರ ಪ್ರಶ್ನೆ!!

#balkaninews #bollywood #aliabhatt #aliabhattmovies #aliabhattbhattinstagram

Tags