ಸುದ್ದಿಗಳು

ನನಗೆ ಸ್ಫರ್ಧೆ ಎಂದರೆ ತುಂಬಾ ಇಷ್ಟ : ಅನನ್ಯಾ ಪಾಂಡೆ

ಮುಂಬೈ, ಏ.16:

‘ಸ್ಟೂಡೆಂಟ್‌ ಆಪ್‌ ದ ಇಯರ್‌ 2’ ಸಿನಿಮಾ ಮೂಲಕ ಬಾಲಿವುಡ್‌ ಗೆ ಪಾದಾರ್ಪಣೆ ಮಾಡುತ್ತಿರುವ ಮುದ್ದು ಮುಖದ ಚೆಲುವೆ ಹೆಸರು ಅನನ್ಯಾ ಪಾಂಡೆ.

ಹಿರಿಯ ನಟ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ಮಾತು ಬಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದರೂ ತಪ್ಪಾಗಲಾರದು. ” ನಟನಾ ವೃತ್ತಿಯಲ್ಲಿ ಸ್ಪರ್ಧೆ ಇರಬೇಕು. ನನಗೆ ಸ್ಪರ್ಧೆ ಸದಾ ಇಷ್ಟ. ಯಾಕೆಂದರೆ ನಟರ ಮಧ್ಯೆ ಸ್ಪರ್ಧೆ ಇದ್ದರೆ ಮಾತ್ರ ಸಿನಿಮಾ ಇಂಡಸ್ಟ್ರಿ ಬೆಳೆಯಲು ಸಾಧ್ಯ. ಹೊಸ ಪ್ರತಿಭೆಗಳ ಆಗಮನವಾದರೆ ಮಾತ್ರ ಉಳಿದವರು ಹಾರ್ಡ್‌ವರ್ಕ್‌ ಮಾಡತೊಡಗುತ್ತಾರೆ ಎಂದಿದ್ದಾರೆ ಅನನ್ಯಾ ಪಾಂಡೆ.

ಆದರೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಇನ್ನೊಂದು ವಿಚಾರ ಕೂಡಾ ಇದೆ. ಕಲಾವಿದರುಗಳ ನಡುವಿನ ಸ್ಪರ್ಧೆ ಆರೋಗ್ಯಕರವಾಗಿಯೂ ಇರಬೇಕು ಎಂದು ಹೇಳುವ ಅನನ್ಯಾ ಪಾಂಡೆ ನಮ್ಮ ಸಿನಿಮಾದಲ್ಲೂ ಇಂಥದ್ದೊಂದು ಸ್ಪರ್ಧೆಯನ್ನು ಪ್ರೇಕ್ಷಕರು ನೋಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೋವನ್ನೇ ನುಂಗಿ , ವಿಶ್ವವನ್ನೇ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್

#balkaninews #ananyapandey #bollywood #hindimovies #ananyapandetyhits #ananyapandetyinstagram

Tags