ಸುದ್ದಿಗಳು

ಅಂಚೆ ಮೂಲಕ ಮೊದಲ ಮತ ಹಾಕಿ ಸುದ್ದಿಯಾಗಿದ್ದ ಯೋಧ ರಾಜ್ ನಾಯಕ್ ರಿಂದ ಎಮ್ ಪಿ ಸುಮಲತಾರವರ ಭೇಟಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಂಡ್ಯದಲ್ಲಿ ವಿಜಯ ಸಾಧಿಸುವ ಮೂಲಕ ನಟಿ ಸುಮಲತಾ ಮಂಡ್ಯ ಸಂಸದೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳಲ್ಲಿ ಜಯ ಸಾಧಿಸಿದ್ದ ಈ ನಟಿ ಸಂಸದೆಯಾಗಿ ಹೊರ ಹೊಮ್ಮಿದ್ದಾರೆ.

ಸದ್ಯ ನಟಿ ಸುಮಲತ ಗೆಲುವಿಗೆ ಬಹಳಷ್ಟು ಮಂದಿ ಶ್ರಮ ಪಟ್ಟಿದ್ದಾರೆ. ಕೆಲವೊಂದು ಮತಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದರಲ್ಲಿ ಯೋಧರ ಮತ ಕೂಡ ಮುಖ್ಯವಾಗಿತ್ತು. ಸುಮಲತಾ ಪರ ಮತ ಚಲಾಯಿಸಿ ಬಹಿರಂಗವಾಗಿ ಹೇಳಿಕೊಂಡಿದ್ದ ಸಿಆರ್‌ ಪಿಎಫ್ ಯೋಧ ಆರ್. ನಾಯ್ಕರ್ ಅವರು ಸುಮಲತಾ ಭೇಟಿ ಮಾಡಿ ಮಾತನಾಡಿದ್ದಾರೆ.  ಸದ್ಯ ಭೇಟಿಯ ಫೋಟೋಗಳು ಸಕ್ಕತ್ ವೈರಲ್ ಆಗಿವೆ. ಇನ್ನೂ ಸುಮಲತಾ ಅವರನ್ನು ಭೇಟಿ ಮಾಡಿದ್ದು ಅವಿಸ್ಮರಣೀಯ ಎಂದು ಹೇಳಿದ್ದಾರೆ. ಈ ವೇಳೆ ಯೋಧನಿಗೆ ಸುಮಲತ ಸಸಿಯೊಂದನ್ನು ನೀಡಿದ್ದಾರೆ.

ಯೋಧನ ಮತ ಅಸಿಂಧುವಾಗಿತ್ತು

ಇನ್ನೂ ಈ ಯೋಧ ಮತ ಹಾಕುವ ವೇಳೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಮತವನ್ನು ಅಸಿಂಧುಗೊಳಿಸು ವಂತೆ ಚುನಾವಣಾ ಆಯೋಗವು ಮಂಡ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಹಾಗಾಗಿ ಇವರ ಮತ ಅಸಿಂಧುಗೊಳಿಸಲಾಯ್ತು. ಮತಚಲಾಯಿಸಿದ ಗೌಪ್ಯತೆ ಕಾಪಾಡಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಹಾಗಾಗಿ ಅಸಿಂಧುವಾಗಿತ್ತು.

ಫ್ಯಾನ್ ಬಾಯ್ ಮೊಮೆಂಟ್: ಲೆಜೆಂಡರಿ ಕ್ರಿಕೆಟಿಗನನ್ನು ಭೇಟಿಯಾದ ಸೂಪರ್ ಸ್ಟಾರ್!!!

#balkaninews #sumalatha #sumalathaamarnath #mandya #mandyasoldiers

 

Tags