ಸುದ್ದಿಗಳು

ವಿದೇಶದಿಂದ #ಮೀಟೂ ಸಂಗೀತಾ ಭಟ್ ಸಂದೇಶ

ನಟಿ ಸಂಗೀತಾ ಭಟ್ ಕೆಲವು ತಿಂಗಳುಗಳ ಹಿಂದೆಯಷ್ಟೇ ಚಿತ್ರರಂಗದಿಂದ ವಿದಾಯ ಹೇಳಿದ್ದರು. ಅದಾದ ಮೇಲೆ ಅವರು ನಟಿಸಿದ್ದ ‘ಅನುಕ್ತ’ ಹಾಗೂ ‘ಕಿಸ್ಮತ್’ ಚಿತ್ರಗಳು ತೆರೆ ಕಂಡಿದ್ದವು. ಇದೀಗ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಟ್ರೈಲರ್ ಸಹ ಬಿಡುಗಡೆಗೊಂಡಿದ್ದು, ನೋಡುಗರಿಂದ ಒಳ್ಳೆಯ ಕಾಮೆಂಟ್ ಗಳನ್ನು ಪಡೆಯುತ್ತಿದೆ.

ಅಂದಹಾಗೆ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ನಿನ್ನೆಯಷ್ಟೇ ನಡೆಯಿತು. ಇದೇ ವೇಳೆ ಸಂಗೀತಾ ಭಟ್ ಬಿಟ್ಟು ಚಿತ್ರತಂಡದವರೆಲ್ಲರೂ ಭಾಗಿಯಾಗಿದ್ದರು. ಹೀಗಾಗಿ ಅವರು ವಿದೇಶದಿಂದ ವಿಡಿಯೋ ಕಳುಹಿಸುವ ಮೂಲಕ ಶುಭ ಹಾರೈಸಿದ್ದಾರೆ.

‘ಸದ್ಯ ನಾನು ಭಾರತದಲ್ಲಿ ಇಲ್ಲ. ಟ್ರೇಲರ್ ಬಿಡುಗಡೆ ಆಗಿರುವುದಕ್ಕೆ ತುಂಬ ಖುಷಿ ಆಗಿದೆ. ಹಗಲೂ-ರಾತ್ರಿ ಕಷ್ಟಪಟ್ಟು ನಾವು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇವೆ. ನಿರ್ದೇಶಕ ಕ್ರಿಶ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪ್ರತಿ ಬಾರಿಯೂ ಒಂದು ಪ್ರಯೋಗಾತ್ಮಕ ಪಾತ್ರ ಮಾಡಬೇಕು ಎಂಬ ಆಸೆ ನನ್ನದಾಗಿತ್ತು. ಅದಕ್ಕೆ ತಕ್ಕಂತೆ ಈ ಅವಕಾಶ ಸಿಕ್ಕಿತು. ಮಾನಸಿಕವಾಗಿ ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ಹೇಗೆ ಮೂಡಿಬಂದಿದೆ ಎಂಬುದನ್ನು ಜನರು ನೋಡಿ ಹೇಳಬೇಕು’ ಎಂದು ವಿಡಿಯೋದಲ್ಲಿ ಸಂಗೀತಾ ಭಟ್ ಹೇಳಿದ್ದಾರೆ.

‘ಇನ್ನು ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ನಾನಿರಬೇಕಿತ್ತು. ಆದರೆ, ಭಾರತದಲ್ಲಿ ನಾನಿಲ್ಲದ ಕಾರಣ, ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ. ಈ ಮೂಲಕ ಚಿತ್ರದ ಪ್ರಚಾರದಿಂದ ದೂರ ಉಳಿಯುತ್ತಾರೆಂದು ಓಡಾಡಿದ ಸುದ್ದಿಗೆ ಬ್ರೇಕ್ ಬಿದ್ದಿದೆ. ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದು, ಬಾಲು ನಾಗೇಂದ್ರ ನಾಯಕರಾಗಿದ್ದಾರೆ.

ನಿರ್ಮಾಪಕ ಅಲ್ಲು ಅರವಿಂದ್ ಗೆ ಶಾಕ್ ಕೊಟ್ಟ ಶ್ರದ್ಧಾ ಕಪೂರ್

#SangeethaBhat #SangeethaBhatMovie #MeetoSangeethaBhat ‍#kannadaSuddigalu #KapataNatakaPatradari

Tags