ಸುದ್ದಿಗಳು

ಚಕ್ ರಸೆಲ್ ಗುರುಗಳಾಗಿ ಸಿಕ್ಕಿದ್ದು ನನ್ನ ಭಾಗ್ಯ : ಆಶಾ ಭಟ್

ಮುಂಬೈ, ಏ.16:

ಬಾಲಿವುಡ್ ಬಿಲ್ಲಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಮುದ್ದು ಮುಖದ ಚೆಲುವೆ ಆಶಾ ಭಟ್ ಭದ್ರಾವತಿಯ ಬೆಡಗಿ.

ಮಾಡೆಲಿಂಗ್ ನಲ್ಲಿ ಮಿಂಚಿದ ಭದ್ರವಾತಿ ಬೆಡಗಿ ಮಾಜಿ ಮಿಸ್ ಸೂಪರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಆಶಾ ಭಟ್ ಅಭಿನಯದ ಮೊದಲ ಹಿಂದಿ ಚಿತ್ರ ಜಂಗ್ಲಿ ಈಗಾಗಲೇ ಬಿಡುಗಡೆಯಾಗಿದ್ದು ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಲಿವುಡ್ ನಲ್ಲಿ ಹಲವಾರು ಜನಪ್ರಿಯ ಸಿನಿಮಾಗಳನ್ನು ಮಾಡಿರುವ ಚಕ್ ರಸೆಲ್ ಅವರ ನಟನಾ ಗರಡಿಯಲ್ಲಿ ಪಳಗಿದ್ದಾರೆ ಆಶಾ ಭಟ್.

” ಚಕ್ ರಸೆಲ್ ನನ್ನ ಗುರುಗಳು. ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ. ಅವರಂತಹ ಮೆಂಟರ್ ಪಡೆದುದಕ್ಕೆ ನಾನು ಧನ್ಯ ಎಂದರೂ ತಪ್ಪಾಗಲಾರದು. ಮೊದಲ ದಿನದಿಂದಲೇ ಅವರು ನನಗೆ ಬಹಳಷ್ಟು ಕಲಿಸಿದರು. ಒಟ್ಟಿನಲ್ಲಿ ನನ್ನ ನಟನಾ ಜರ್ನಿ ಒಂದು ಒಳ್ಳೆಯ ಚಿತ್ರದೊಂದಿಗೆ ಆರಂಭವಾಯಿತು” ಎಂದು ಸಂತಸದೊಂದಿಗೆ ಹೇಳುತ್ತಾರೆ ಆಶಾ ಭಟ್.

ನನಗೆ ನಟನೆಯ ಗಂಧ ಗಾಳಿ ಗೊತ್ತಿರಲಿಲ್ಲ. ಕ್ಯಾಮೆರಾ ಮುಂದೆ ಹೇಗೆ ನಟಿಸುವುದು ಹೇಗೆಂದು ಕೂಡಾ ತಿಳಿದಿರಲಿಲ್ಲ. ಮೊದಲಿಗೆ ತುಂಬಾ ಕಷ್ಟವಾಗುತ್ತಿತ್ತು. ಸೋಲುತ್ತಿದ್ದೆ. ಆದರೆ, ಮತ್ತೆ ಹೊಸ ಭರವಸೆಯೊಂದಿಗೆ ಪ್ರಾರಂಭಿಸುತ್ತಿದ್ದೆ ಎಂದು ತಮ್ಮ ಬಣ್ಣದ ಪಯಣದ ಬಗ್ಗೆ ವಿವರಿಸುತ್ತಾರೆ ಆಶಾ ಭಟ್.

ಜಂಗ್ಲಿ ಚಿತ್ರದಲ್ಲಿ ವಿದ್ಯುತ್ ಜಮ್ವಾಲ್ ಅವರಿಗೆ ನಾಯಕಿಯಾಗಿ ನಟಿಸಿರುವ ಆಶಾ ಭಟ್ ಪ್ರಸ್ತುತ ಚಿತ್ರದಲ್ಲಿ ವೈಲ್ಡ್ ಲೈಫ್ ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Image result for asha bhat

Image result for asha bhat

ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ

#balkaninews #ashabhatt #ashabhattmovies #ashabhattmovie #ashabhattinstagram

Tags