ಸುದ್ದಿಗಳು

ಬಹು ವರುಷದ ಕನಸು ನನಸಾದ ಸಂತಸದಲ್ಲಿ ಅಶ್ವಿನಿ ಗೌಡ

ಬೆಂಗಳೂರು, ಏ.16:

ಕಿರುತೆರೆ ನಟಿ ಅಶ್ವಿನಿ ಗೌಡ ಇದೀಗ ತುಂಬಾ ಸಂತಸದಿಂದ ಇದ್ದಾರೆ. ಅದಕ್ಕೆ ಕಾರಣ ಇಷ್ಟೇ. ತಮ್ಮ ಹದಿನೈದು ವರುಷದ ಕನಸು ನನಸಾದ ಸಂತಸದಲ್ಲಿದ್ದಾರೆ ನಟಿ ಅಶ್ವಿನಿ ಗೌಡ.

‘ವಾರಸ್ದಾರ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಶ್ವಿನಿಗೌಡ ಈಗ ಎಎಂಜಿ ಎಂಬ ಸಂಸ್ಥೆ ಆರಂಭಿಸಿದ್ದಾರೆ. ವಾರಸ್ದಾರ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿರುವ ಅಶ್ವಿನಿ ಗೌಡ ಸುಮಾರು ಹದಿನೈದಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮತ್ತು ಈಗಲೂ ಕಿರುತೆರೆಯಲ್ಲಿ ಮಿಂಚುತ್ತಿರುವ ಅಶ್ವಿನಿ ಗೌಡ ಬೆಳ್ಳಿತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರತಿಭೆಗಳನ್ನು ಶೋಧಿಸುವುದು ಮತ್ತು ಉತ್ತಮ ಅವಕಾಶ ಕಲ್ಪಿಸುವುದು ಎಎಂಜಿ ಸಂಸ್ಥೆಯ ಮುಖ್ಯ ಉದ್ದೇಶ. ಎಲ್ಲದಕ್ಕಿಂತಲೂ ಮುಖ್ಯವಾಗಿ ಹಿರಿಯ ಕಲಾವಿದರಿಗೆ ಮತ್ತೊಮ್ಮೆ ಅವಕಾಶ ಸಿಗುವಂತೇ ಮಾಡುವುದು ಕೂಡಾ ಈ ಸಂಸ್ಥೆಯ ಮುಖ್ಯ ಉದ್ದೇಶ.

ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿರುವ ಅಶ್ವಿನಿಗೌಡ ಅವರ ಈ ಹೊಸ ಸಂಸ್ಥೆಯನ್ನು ಉದ್ಘಾಟಿಸಲು ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಆಗಮಿಸಿದ್ದರು. ಅಶ್ವಿನಿಗೌಡ ಅವರಿಗೆ ಮನುಗೌಡ ಜೊತೆಯಾಗಿದ್ದಾರೆ. ಕೂಡಲಸಂಗಮ ಪಂಚಮಶಾಲಿ ಮಠದ ಸ್ವಾಮೀಜಿ ಶ್ರೀ ಬಸವಜಯ ಮೃತ್ಯುಂಜಯ ಆಗಮಿಸಿ ಆಶೀರ್ವಚನ ಮಾಡಿದರು.

ಉಳಿದಂತೆ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಾಮ ಹರೀಶ್, ಗಿರೀಶ್​​​​​, ನಟ ಗುರುದತ್, ಗಣೇಶ್ ರಾವ್ ಹಾಗೂ ಇತರರು ಸಂಸ್ಥೆಗೆ ಆಗಮಿಸಿ ಶುಭ ಕೋರಿದ್ದಾರೆ.

ಕುಂದಾಪುರದ ಬೆಡಗಿಯ ಬಣ್ಣದ ಲೋಕ

#balkaninews #bhamaharish #ashwinigowda #actressashwinigowdamovies #ashwinigowdaserials

Tags