ಸುದ್ದಿಗಳು

ನಟನೆಗೆ ಗುಡ್ ಬೈ ಹೇಳಿದ್ರಾ ಚಾರ್ಮಿ..!!?!!

ಹೈದ್ರಾಬಾದ್, ಮೇ.22:

ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ ನಟಿ ಚಾರ್ಮಿ ಕೌರ್ ನಟನೆಗೆ ಗುಡ್ ಬೈ ಹೇಳಿದ್ದಾರೆ.

ಇತ್ತೀಚೆಗೆ ತಮ್ಮ 32 ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಂಡ ಚಾರ್ಮಿ, ಈ ಸಮಯದಲ್ಲಿ ತಾವು ನಟನೆಗೆ ಗುಡ್ ಬೈ ಹೇಳುವುದಾಗಿ ಅನೌನ್ಸ್ ಮಾಡಿದ್ದಾರೆ. ನಟನೆ ಬಿಟ್ಟು ನಿರಂತರವಾಗಿ ಸಿನಿಮಾಗಳ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಪೂರಿ ಜಗನ್ನಾಥ್ ನಿರ್ದೇಶನ ಐಸ್ಮಾರ್ಟ್ ಶಂಕರ್ ಚಿತ್ರದ ಸೆಟ್ನಲ್ಲಿ ಬರ್ತ್ ಡೇ ಆಚರಿಸಿಕೊಂಡ ನಂತರ ಈ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ  ತಾನು ಮದುವೆಯಾಗುವುದಿಲ್ಲ ಬದಲಿಗೆ ಕೆಲಸದ ಕಡೆ ಗಮನ ಹರಿಸುತ್ತೇನೆ ಎಂದು ಸಹ ಹೇಳಿದ್ದಾರೆ.

ಚಾರ್ಮಿ ಕಳೆದ ಕೆಲವು ವರ್ಷಗಳಿಂದ ನಟನೆಯಿಂದ ದೂರ ಸರಿದಿದ್ದಾರೆ. ಆಕೆ ಕೊನೆಯ ಬಾರಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದು 2015ರಲ್ಲಿ ಮಂತ್ರ, ಜ್ಯೋತಿಲಕ್ಷ್ಮಿ ಸಿನಿಮಾಗಳ ಮೂಲಕ. ನಂತರ  ನಿರ್ಮಾಪಕಿಯಾಗಿ ರೋಗ್, ಪೈಸಾ ವಸೂಲ್, ಮೆಹಬೂಬಾ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸದ್ಯಕ್ಕೆ ಇಸ್ಮಾರ್ಟ್ ಶಂಕರ್, ರೊಮ್ಯಾಂಟಿಕ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಚಾರ್ಮಿ, ಸನ್ ಆಫ್ ಮುದ್ದೇ ಗೌಡ ಎನ್ನುವ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು.

Image result for charmi

‘ಪೈಲ್ವಾನ್’ ಚಿತ್ರದ ಸುನೀಲ್ ಶೆಟ್ಟಿಯ ಪಾತ್ರದ ಗುಟ್ಟು ರಟ್ಟು…!!!

#balkaninews #charmi #teluguactresscharmi #charmimovies #charmikannadamovies #charmiinstagram

 

Tags