ಸುದ್ದಿಗಳು

‘ನಂದಿನಿ’ ಧಾರಾವಾಹಿಯಲ್ಲಿ ಬದಲಾವಣೆ: ನಿತ್ಯಾ ರಾಮ್ ಜಾಗಕ್ಕೆ ಬಂದ್ರು ಈ ನಟಿ…!!!

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿಯಲ್ಲಿ ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ಈ ಧಾರಾವಾಹಿಯಿಂದ ಅವರು ಬ್ರೇಕ್ ತೆಗೆದುಕೊಂಡು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇದೇ ತಿಂಗಳ 5 ಮತ್ತು 6 ರಂದು ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಉದ್ಯಮಿಯೊಬ್ಬರ ಜೊತೆಗೆ ನಿತ್ಯಾ ರಾಮ್ ವಿವಾಹವಾಗುತ್ತಿದೆ. ಮದುವೆಯ ಬಳಿಕ ಅವರು ಕಿರುತೆರೆಯನ್ನು ಬಿಡಲಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿಯೆಂದರೆ ಈ ಧಾರಾವಾಹಿಯಲ್ಲೀಗ ಛಾಯಾ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಇನ್ಮುಂದೆ ಈ ಧಾರಾವಾಹಿಯಲ್ಲಿ ಛಾಯಾ ಸಿಂಗ್ ನಟಿಸಲಿದ್ದು, ಇವರು ನಿತ್ಯ ರಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಇವರು ಈಗಾಗಲೇ, ‘ಸರೋಜಿನಿ’, ‘ಪ್ರೇಮ ಕಥೆಗಳು’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಅಂದ ಹಾಗೆ ಈ ‘ನಂದಿನಿ’ ಧಾರಾವಾಹಿಯಲ್ಲಿ ವಿನಯ್ಗೌಡ, ಶ್ರೀನಿವಾಸ ಪ್ರಭು, ಜಯಶ್ರೀ ಎಸ್ ರಾಜ್, ರವಿ ಭಟ್, ರಶ್ಮಿ, ಅನುಪೂವಮ್ಮ ಮೊದಲಾದ ಬಹು ತಾರಾಗಣವಿದೆ. ಸೋಮ-ಶುಕ್ರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತದೆ. ಇನ್ನು ಛಾಯಾಸಿಂಗ್ ‘ತುಂಟಾಟ’, ‘ಆಕಾಶ ಗಂಗೆ’, ‘ಸಖಾ ಸಖಿ’, ‘ಮಫ್ತಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ಒಂದು ಸ್ಮೈಲ್ ಕೊಡಿ’ ಎಂದ ರಶ್ಮಿಕಾ ಮಂದಣ್ಣ

#Nandini #NandiniSerial   #ChayaSingh #NityaRam #KannadaSuddigalu

Tags