ಸುದ್ದಿಗಳು

ಬಾಬಿ ಎಂದು ಪ್ರೀತಿಯಿಂದ ಕರೆದ ವಿಕ್ಕಿ ಕೌಶಾಲ್ ಗೆ ಈ ರೀತಿ ಪ್ರತಿಕ್ರಿಯಿಸಿದ್ರು ನಟಿ ದೀಪಿಕಾ ಪಡುಕೋಣೆ

ಮುಂಬೈ, ಮಾ.23:

ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್ ಬಾಲಿವುಡ್ ನ ಮೋಸ್ಟ್ ಲವ್ವೆಬಲ್ ಕಪಲ್ ಎಂಬುದು ಈಗಾಗಲೇ ಜಗಜಾಹೀರಾಗಿದೆ. ದೀಪಿಕಾ ತನ್ನ ಪ್ರತಿಭೆಯಿಂದಲೇ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರೆ, ರಣ್ ವೀರ್ ಇಂದು ಈ ಸ್ಥಾನದಲ್ಲಿ ನಿಂತಿದ್ದರೆ ಅದರ ಹಿಂದಿನ ಕಠಿಣ ಪರಿಶ್ರಮ ಅವರೊಬ್ಬರಿಗೆ ಗೊತ್ತು. ಇತ್ತೀಚೆಗೆ ‘ಪದ್ಮಾವತ್’ ಚಿತ್ರದಲ್ಲಿನ ನಟನೆಗಾಗಿ  ಝೀ ಸಿನಿ ಪ್ರಶಸ್ತಿ ವತಿಯಿಂದ ದೀಪಿಕಾ ಪಡುಕೋಣೆಗೆ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಯನ್ನು ಬಾಚಿಕೊಂಡರೆ, ರಣ್ ವೀರ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.

ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್

ಅಂದಹಾಗೆ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ರಾಮ್ ಲೀಲಾ’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಚಿತ್ರದಲ್ಲಿ ರಣ್ ವೀರ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದು, ಈ ಮೂರು ಚಿತ್ರಗಳು ಸೂಪರ್ ಹಿಟ್ ಆಗಿದೆ. ಝೀ ಸಿನಿ ಪ್ರಶಸ್ತಿ ಪ್ರಧಾನ ಸಮಾರಂಭದ ಜವಾಬ್ದಾರಿ ಹೊತ್ತಿದ್ದ ನಟ ಕಾರ್ತಿಕ್ ಆರ್ಯನ್ ಹಾಗೂ ವಿಕ್ಕಿ ಕೌಶಾಲ್, ಪ್ರೇಕ್ಷಕರನ್ನು ತಮ್ಮ ನಿರೂಪಣೆಯಿಂದ, ಮಾತಿನ ಶೈಲಿಯಿಂದ ನಕ್ಕು ನಗಿಸುತ್ತಿದ್ದರು. ಕಾರ್ಯಕ್ರಮದಲ್ಲಿ ದೀಪ್ ವೀರ್ ರಿಮ್ಯಾರಿ ಎಂಬ ವಿಚಾರದಲ್ಲಿ ಅವರಿಬ್ಬರು ನಟಿಸಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಈ ನಡುವೆ ವಿಕ್ಕಿ, ದೀಪಿಕಾ ಪಡುಕೋಣೆಯನ್ನು ಬಾಬಿ ಎಂದು ಕರೆದರೆ, ಇದರಿಂದ ಕೊಂಚ ಇರಿಸುಮುರಿಸಿಗೊಳಗಾದ ದೀಪಿಕಾ, ತನ್ನನ್ನು ಬಾಬಿ ಎಂದು ಕರೆಯಬೇಡ ಎಂದು ನೇರವಾಗಿ ಹೇಳಿದರು.

ಅಂದಹಾಗೆ ದೀಪಿಕಾ ಹಾಗೂ ವಿಕ್ಕಿ ಕೌಶಾಲ್ ಅವರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಿಕ್ಕಿ ಕೌಶಾಲ್ ‘ಪದ್ಮಾವತ್’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ದೀಪಿಕಾ ಪಡುಕೋಣೆ ಎ ಲಿಸ್ಟ್ ನಲ್ಲಿರುವ ನಟರೊಂದಿಗೆ ಮಾತ್ರ ತೆರೆ ಹಂಚಿಕೊಳ್ಳುವ ಶರತ್ತು ವಿಧಿಸಿದ್ದರಿಂದ, ವಿಕ್ಕಿ ಬದಲಿಗೆ ಶಾಹೀದ್ ಕಪೂರ್ ಅವರನ್ನು ಆ ಜಾಗಕ್ಕೆ ಬದಲಾಯಿಸಲಾಯಿತು.

ಈ ಬಾಲಿವುಡ್ ತಾರೆಯರ ನಿಕ್ ನೇಮ್ ಎನೆಂದೂ ನಿಮಗೆ ಗೊತ್ತೆ….?

#deepikapadukone #balkaninews #ranveersingh #ranveersinghanddeepikapadukone #hindimovies

Tags