ಸುದ್ದಿಗಳು

ನಶೆ ಏರಿಸುವ ದಿಶಾ ಪಟಾನಿ ಸೆಲ್ಫಿ ನೋಡಿದ್ರಾ?

ಆಗಾಗ್ಗೆ ಬಾಲಿವುಡ್ ನಟರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ತಮ್ಮ ಪ್ರಾಜೆಕ್ಟ್ ಗಳ ಬಗ್ಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಪೋಸ್ಟ್ ಮಾಡುತ್ತಿರುತ್ತಾರೆ.

ಅಂದಹಾಗೆ ಬಾಲಿವುಡ್ ನಲ್ಲಿ ಸೋಷಿಯಲ್ ಮೀಡಿಯಾ ಎಂದರೆ ಮೊದಲು ನೆನಪಿಗೆ ಬರುವುದು ದಿಶಾ ಪಟಾನಿ ಹೆಸರು. ಅಷ್ಟರ ಮಟ್ಟಿಗೆ ಅದರಲ್ಲಿ ಸಕ್ರಿಯರಾಗಿರುತ್ತಾರೆ ಈ ನಟಿ. ಶುಕ್ರವಾರ ಸಂಜೆ, ಉದಯಪುರಕ್ಕೆ ತೆರಳುವ ಮೊದಲು ದಿಶಾ ತನ್ನ ಸಾಕುಪ್ರಾಣಿಗಳ ಒಂದೆರಡು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರು. ಅದರ ಜೊತೆಗೆ ಮನಮೋಹಕವಾದ ಸೆಲ್ಫಿಯನ್ನು ಸಹ ಪೋಸ್ಟ್ ಮಾಡಿದ್ದರು.

Image result for Bharat actor Disha Patani flaunts a glam look in her latest selfie & we can’t take our eyes off her; See Pic

ಸೆಲ್ಫಿಯಲ್ಲಿ ದಿಶಾ ಆಭರಣ ಮತ್ತು ಉಂಗುರ ಹೈಲೆಟ್ ಆಗಿದ್ದು, ಸುರುಳಿ ತರಹ ವಿನ್ಯಾಸಗೊಳಿಸಿರುವ ಕೇಶ, ಸ್ಮೋಕಿ ಐ ಮೇಕಪ್ ನಲ್ಲಿ ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ ದಿಶಾ. ದಿಶಾ ಸೆಲ್ಫಿ ನೋಡಿ ಅಭಿಮಾನಿಗಳು ಬಿಟ್ಟ ಕಣ್ಣು ಮುಚ್ಚಿಲ್ಲವಂತೆ. ಇತ್ತೀಚೆಗೆ ಬಿಡುಗಡೆಯಾದ ‘ಭರತ್‌’ ಚಿತ್ರದಲ್ಲಿ ರಾಧಾ ಪಾತ್ರದಲ್ಲಿ ದಿಶಾ ಅಭಿಮಾನಿಗಳ ಮನಗೆದ್ದಿದ್ದರು.

ಈಗ ಮೋಹಿತ್ ಸೂರಿ ಅವರ ಮುಂಬರುವ ಚಿತ್ರ ‘ಮಲಾಂಗ್’ ನಲ್ಲಿ ದಿಶಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಕುನಾಲ್ ಕೆಮ್ಮು ಮತ್ತು ಅನಿಲ್ ಕಪೂರ್ ತಾರಗಣದಲ್ಲಿದ್ದಾರೆ. ಚಿತ್ರವನ್ನು ಮಾರಿಷಸ್‌ನಲ್ಲಿ ಚಿತ್ರೀಕರಿಸಲಾಗಿದ್ದು, 2020 ರಂದು ಪ್ರೇಮಿಗಳ ದಿನದಂದು ಚಿತ್ರ ತೆರೆಗೆ ಬರಲಿದೆ.

 

View this post on Instagram

 

💋

A post shared by disha patani (paatni) (@dishapatani) on

‘ಪ್ಯಾರಿಸ್ ಪ್ಯಾರಿಸ್’ಗೆ ಸೆನ್ಸಾರ್ ಸಮಸ್ಯೆ: ಕಾಜೋಲ್ ಕೊಟ್ಟ ಉತ್ತರ ಹೀಗಿತ್ತು…

#balkaninews #dishapatani # selfie #dishapataniinstagram

Tags