ಸುದ್ದಿಗಳು

ಡ್ರಾಯಿಂಗ್ ಬಿಡಿಸಿದ ಹರಿಪ್ರಿಯಾ

ಬಿಡುವಿನ ವೇಳೆಯಲ್ಲಿ ಡ್ರಾಯಿಂಗ್ (ಚಿತ್ರಕಲೆ) ಬಿಡಿಸಿ ಗಮನ ಸೆಳೆದ ಹರಿಪ್ರಿಯಾ

ನಟಿ ಹರಿಪ್ರಿಯಾ, ‘ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರದಲ್ಲಿ ‘ರಶ್ಮಿ’ಯಾಗಿ ನಟಿಸಿದ್ದಾರೆ. ವಯಕ್ತಿಕವಾಗಿಯೂ ಅವರಿಗೆ ಈ ಪಾತ್ರ ಇಷ್ಟವಾಗಿದೆಯಂತೆ.

ಬೆಂಗಳೂರು, ಆ. 23: ಕನ್ನಡ ಚಿತ್ರರಂಗದ ಮುದ್ದಾದ ಪೋರಿಯರಲ್ಲಿ ಹರಿಪ್ರಿಯಾ ಕೂಡಾ ಒಬ್ಬರು. ಸೌಂದರ್ಯ ಮತ್ತು ಉತ್ತಮ ಅಭಿನಯ, ಇವೆರಡನ್ನೂ ಹೊಂದಿರುವ ಅವರು ಇದೀಗ ತಮ್ಮ ಬಿಡುವಿನ ವೇಳೆಯಲ್ಲಿ ಡ್ರಾಯಿಂಗ್ (ಚಿತ್ರಕಲೆ) ಬಿಡಿಸಿ ಗಮನ ಸೆಳೆದಿದ್ದಾರೆ.

ಲೈಫ್ ಜೊತೆ ಒಂದ್ ಸೆಲ್ಫಿ

ಹೌದು, ಚಿಕ್ಕಮಗಳೂರಿನ ಈ ಚೆಲುವೆ ನಾಳೆ ಬಿಡುಗಡೆಯಾಗುತ್ತಿರುವ ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದಲ್ಲಿ ರಶ‍್ಮಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಂತಸದ ಕ್ಷಣದಲ್ಲಿರುವ ಅವರು ತಮ್ಮ ಪಾತ್ರವನ್ನು ಮತ್ತು ನಕುಲ್ ಪಾತ್ರವನ್ನು ಡ್ರಾಯಿಂಗ್ ಮೂಲಕ ರಚಿಸಿ, ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗಮನ ಸೆಳೆದಿರುವ ಹರಿಪ್ರಿಯಾ

ಸಾಮಾನ್ಯವಾಗಿ ಸಿನಿಮಾ ಕಲಾವಿದರು ಎಂದರೆ ಮೂರೊತ್ತು ಮೇಕಪ್ ಮಾಡಿಕೊಳ್ಳುವವರು, ಬರೀ ನಟನೆ ಮಾಡುವವರು ಅಂತಾನೇ ಬಹುತೇಕ ಎಲ್ಲರೂ ಭಾವಿಸಿರುತ್ತಾರೆ. ಹೀಗಿರುವಾಗ ಡ್ರಾಯಿಂಗ್ ಬಿಡುಸುವ ಮೂಲಕ , ಸೆಲೆಬ್ರಿಟಿಗಳಿಗೂ ಎಲ್ಲಾ ರೀತಿಯ ಕೆಲಸಗಳು ಬರುತ್ತವೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಡ್ರಾಯಿಂಗ್ ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಂತೆಯೇ ಕೆಲವು ದಿನಗಳ ಹಿಂದೆಯಷ್ಟೇ ಅವರು ರಂಗೋಲಿ ಬಿಡಿಸುವ ಮೂಲಕ ಗಮನ ಸೆಳೆದಿದ್ದರು.

ರಶ್ಮಿ ಪಾತ್ರದಲ್ಲಿ ತನ್ನನ್ನೇ ಕಂಡಿರುವ ಹರಿಪ್ರಿಯಾ

“ನನ್ನ ಜೀವನದಲ್ಲಿ ಮರೆಯಲಾಗದ ಪಯಣ ಈ ‘ಲೈಫ್ ಜೊತೆ ಒಂದ್ ಸೆಲ್ಪಿ’ ಚಿತ್ರದಲ್ಲಾಗಿದೆ. ಒಂದೊಂದು ಚಿತ್ರದ ಪಾತ್ರವೂ ಆಯಾ ಕಲಾವಿದರಿಗೆ ತೃಪ್ತಿ ನೀಡುತ್ತದೆ. ಈ ಚಿತ್ರದಲ್ಲಿ ನಾನು ನಟಿಸಲು ಒಪ್ಪಿಕೊಂಡಿದ್ದೇ ನನ್ನ ಪಾತ್ರ ನೋಡಿ. ಈವರೆಗೂ ನಾನು ನಟಿಸಿದ ಸಿನಿಮಾಗಳಲ್ಲಿ ಈ ರೀತಿಯ ಪಾತ್ರ ನನಗೆ ಸಿಕ್ಕಿರಲಿಲ್ಲ. ಅದು ‘..ಸೆಲ್ಪಿ’ ಚಿತ್ರದ ಮೂಲಕ ಸಿಕ್ಕಿದೆ. ಈ ಚಿತ್ರತಂಡದೊಂದಿಗೆ ಕಳೆದ ಪ್ರತಿ ಕ್ಷಣವೂ ಮಧುರವಾದದ್ದು. ಆ ಅಂಶಗಳು ಹೆಚ್ಚು ಕಾಲ ಮನಸಿನಲ್ಲಿ ಹಸಿರಾಗಿರಲಿವೆ. ಚಿತ್ರದಲ್ಲಿನ ರಶ್ಮಿ(ಪಾತ್ರದ ಹೆಸರು) ನಿಮಗೆ ಇಷ್ಟವಾಗುತ್ತಾಳೆ” ಎಂದು ತಮ್ಮ ಪಾತ್ರದ ಕುರಿತಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

 

@ sunil Javali

Tags