ಸುದ್ದಿಗಳು

ಹರ್ಷಿಕಾಗೆ ಪೊಲೀಸರಿಂದ ಸನ್ಮಾನ..!

ಪೋಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ಇಶಾ ಪಂತ್ ರವರಿಂದ ಗೌರವ ಸಮರ್ಪಣೆ.

ಪೋಲೀಸ್ ಇಲಾಖೆ ವತಿಯಿಂದ ಮಹಿಳಾ ಸುರಕ್ಷತೆ ಕುರಿತಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಮಹಿಳಾ ಸುರಕ್ಷತೆ ಕುರಿತಾಗಿ ಅರಿವು ಮೂಡಿಸಿ ಮಹಿಳೆಯರಲ್ಲಿ ಉನ್ನತ ಪ್ರಾಬಲ್ಯ ಹಾಗೂ ಧೈರ್ಯ ಮತ್ತು ಸಮಸ್ಯೆಗಳು ಬಂದಾಗ ಹೇಗೆ ಎದುರಿಸಬೇಕು ಎಂಬುದರ ಕುರಿತಾಗಿ ಚರ್ಚೆ ನಡೆಯಿತು.

ಹಾಗೂ ಪೋಲೀಸ್ ಇಲಾಖೆಯಿಂದ ಯಾವ ಯಾವ ಸೌಲಭ್ಯಗಳು ಲಭ್ಯವಿದೆ ಎಂಬುದಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೆಂಗಳೂರು ಪೋಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹಾಗೂ ಇಶಾ ಪಂತ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಹರ್ಷಿಕಾ ಪೂಣಚ್ಚರಿಗೆ ಗೌರವಿಸಲಾಯಿತು. ಸದ್ಯಕ್ಕೆ ಹರ್ಷಿಕಾ ಪೂಣಚ್ಚ ತಮಿಳು ಹಾಗೂ ಕನ್ನಡ ಎರಡು ಚಿತ್ರರಂಗಗಳಲ್ಲಿ ನಿರತರಾಗಿದ್ದಾರೆ.

Tags