ಸುದ್ದಿಗಳು

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್

ಹಿರಿಯ ನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಲವ್ ಕಮ್ ಅರೆಂಜ್ಡ್ ಮದುವೆಯಾಗಿದ್ದು, ನಿನ್ನೆ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಇನ್ನು ಹಿತಾ-ಕಿರಣ್ ಮದುವೆಗೆ ಕೃಷಿ ತಾಪಂಡ, ಅನುಪಮಾ ಗೌಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಸಾಕ್ಷಿಯಾದರು. ಅಂದ ಹಾಗೆ ಇವರಿಬ್ಬರೂ ಕಲಾವಿದರಾಗಿದ್ದು, ಹಿತಾ ಈ ವರೆಗೂ ‘1/4 ಕೆಜಿ ಪ್ರೀತಿ’, ‘ಯೋಗಿ ದುನಿಯಾ’, ‘ಒಂಥರ ಬಣ್ಣಗಳು’, ‘ಪ್ರೀಮಿಯರ್ ಪದ್ಮಿನಿ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ನಟ ಕಿರಣ್ 2008ರಲ್ಲಿ ‘ಹಾಗೇ ಸುಮ್ಮನೆ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದು, ‘ಚಿರು’, ‘ಮುಗಿಲ ಮಲ್ಲಿಗೆಯೋ’, ‘ಕಾಂಚನಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವೆಂದರೆ ಇವರಿಬ್ಬರೂ ಒಟ್ಟಾಗಿ ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ನಟಿಸಿದ್ದಾರೆ.

ಕಥಾ ಸಂಗಮ: ಹೊಸಬರ ಬೆಂಬಲಕ್ಕೆ ನಿಂತರು ರಿಷಬ್ ಶೆಟ್ಟಿ

#HithaChandrashekhar #KiranShrinivas #MarriageNews #KannadaSuddigalu

Tags