ಸುದ್ದಿಗಳು

‘ಪ್ರಾರಂಭ’ದಲ್ಲಿಯೇ ಲಿಪ್-ಲಾಕ್ ಮಾಡಿದ ಕೀರ್ತಿ ಕಲಕೇರಿ..!!!

ಸಾಮಾನ್ಯವಾಗಿ ಬಾಲಿವುಡ್-ಹಾಲಿವುಡ್ ಚಿತ್ರಗಳಲ್ಲಿ ಕಂಡು ಬರುತ್ತಿದ್ದ ಲಿಪ್-ಲಾಕ್ ಮತ್ತು ಕಿಸ್ಸಿಂಗ್ ದೃಶ್ಯಗಳು ಕನ್ನಡದ ಹಲವು ಚಿತ್ರಗಳಲ್ಲೂ ಕಂಡು ಬರುತ್ತಿದ್ದು, ಹೆಚ್ಚಾಗುತ್ತಿವೆ. ಈ ಬಾರಿ ಇಂಥದ್ದೊಂದು ಲಿಪ್-ಲಾಕ್ ಸುದ್ದಿಗೆ ಕಾರಣ ಆಗಿರುವುದು ರವಿಚಂದ್ರನ್ ಪುತ್ರ ಮನೋರಂಜನ್ ರವರ ‘ಪ್ರಾರಂಭ’ ಚಿತ್ರ.

ಹೌದು, ಈ ಚಿತ್ರದ ಟ್ರೈಲರ್ ಇತ್ತಿಚೆಗಷ್ಟೇ ಬಿಡುಗಡೆಯಾಗಿತ್ತು. ಈ ಚಿತ್ರದ ದೃಶ್ಯವೊಂದರಲ್ಲಿ ನಾಯಕ-ನಾಯಕಿ ಲಿಪ್-ಲಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಒಂದು ಲವ್ ಸ್ಟೋರಿಯನ್ನು ನಿರ್ದೇಶಕರು ಹೇಳುತ್ತಿರುವುದರಿಂದ, ಸನ್ನಿವೇಶಕ್ಕೆ ತಕ್ಕಂತೆ ಕಿಸ್ಸಿಂಗ್ ದೃಶ್ಯ ಬಂದಿದೆ ಎಂದು ಹೇಳಲಾಗುತ್ತಿದೆ.

ವಿಶೇಷವೆಂದರೆ, ಈ ಚಿತ್ರ ಮೂಲಕ ಹುಬ್ಬಳ್ಳಿಯ ಹುಡುಗಿ ಕೀರ್ತಿ ಕಲಕೇರಿ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸಹಜವಾಗಿ ಮೊದಲ ಚಿತ್ರದಲ್ಲೇ ಇಂತಹ ದೃಶ್ಯಗಳಲ್ಲಿ ನಟಿಸಲು ನಾಯಕಿಯರು ಹಿಂದೇಟು ಹಾಕುವುದುಂಟು. ಆದರೆ, ಪಾತ್ರಕ್ಕೆ ನ್ಯಾಯ ಸಲ್ಲಿಸುವ ಸಲುವಾಗಿ ವೃತ್ತಿಜೀವನದ ‘ಪ್ರಾರಂಭ’ದಲ್ಲೇ ಲಿಪ್ ಲಾಕ್ ಮಾಡಿದ್ದಾರೆ. ಹೀಗಾಗಿ ಮೊದಲ ಚಿತ್ರದಲ್ಲಿಯೇ ಅವರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.


‘ನಿರ್ದೇಶಕರು ಕಥೆ ಹೇಳಿದಾಗ ಆ ದೃಶ್ಯದ ಮಹತ್ವ ಏನೆಂಬುದು ತಿಳಿಯಿತು. ಅಪ್ಪ-ಅಮ್ಮನ ಜೊತೆ ಮಾತನಾಡಿ, ಅನುಮತಿ ಪಡೆದುಕೊಂಡ ನಂತರವೇ ನಾನು ನಟಿಸಿದ್ದು. ನಾಯಕ-ನಾಯಕಿ ನಡುವಿನ ತೀವ್ರವಾದ ಪ್ರೀತಿ ಹೇಗಿದೆ ಎಂಬುದನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಈ ಚಿತ್ರದಲ್ಲಿ ಯಾವ ದೃಶ್ಯವೂ ಅಸಭ್ಯವಾಗಿಲ್ಲ. ಕಲಾವಿದೆ ಎಂದ ಮೇಲೆ ಒಪ್ಪಿಕೊಂಡ ಪಾತ್ರ ಮತ್ತು ಕಥೆಗೆ ಜೀವ ತುಂಬುವ ಜವಾಬ್ದಾರಿ ನಮ್ಮದು’ ಎಂದಿದ್ದಾರೆ ಕೀರ್ತಿ ಕಲಕೇರಿ.

ನಟಿ ಇಲಿಯಾನಾ – ಆಂಡ್ರ್ಯೂ ಬ್ರೇಕ್ ಅಪ್!!?!!

#Keerthi Kalakeri #Praramba #PrarambaMovie #latestkannadamovie, #sandalwoodmovies  ‍#kannadasuddigalu

Tags