ಸುದ್ದಿಗಳು

ಕನಸಿನ ರಾಣಿ ಮಾಲಾಶ್ರೀ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರ

ಕನಸಿನ ರಾಣಿ ಎಂದೇ ಖ್ಯಾತಿ ಗಳಿಸಿರುವ ನಟಿ ಮಾಲಾಶ್ರೀ ಇಂದು ಜನುಮದಿನದ ಸಂಭ್ರಮದಲ್ಲಿದ್ದು, ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿವೆ.

1989 ರಲ್ಲಿ ತೆರೆ ಕಂಡು ಭರ್ಜರಿ ಯಶಸ್ವಿಯಾಗಿದ್ದ”ನಂಜುಂಡಿ ಕಲ್ಯಾಣ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಲಾಶ್ರೀ ಆನಂತರ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು.

ಕ್ಲಾಸ್ ಮತ್ತು ಮಾಸ್ ಚಿತ್ರಗಳಲ್ಲಿ ನಟಿಸುತ್ತಿದ್ದ ಮಾಲಾಶ್ರಿಯವರು ಗಂಡುಬೀರಿ ಮಹಿಳೆಯಾಗಿ, ಮನ ಮಿಡಿಯುವ ಹುಡುಗಿಯಾಗಿ, ಕಾಲೇಜು ಸ್ಟುಡೆಂಟ್ ಆಗಿ, ಪೊಲೀಸ್ ಆಫೀಸರ್ ಆಗಿ,.. ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡು, ಮನೆ ಮಾತಾದರು.


ಸದ್ಯಕ್ಕೆ ಮಾಲಶ್ರೀಯವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎನ್ನಬಹುದು, ಆದರೆ, ಸದ್ಯಕ್ಕೆ ಅವರು ತಮ್ಮ ಹೋಮ್ ಬ್ಯಾನರ್ ಸಿನಿಮಾಗಳ ನಿರ್ಮಾಣದ ಕೆಲಸ ಹಾಗೂ ತಮ್ಮ ಕುಟುಂಬದ ಜೊತೆಗೆ ಖುಷಿಯಾಗಿ ಇದ್ದಾರೆ. ಇವರು ನೂರು ಕಾಲ ಸದಾ ಸಂತೋಷವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

#actressmalashree #actressmalashreebirthday #malashreeramu

Tags