ಸುದ್ದಿಗಳು

ತೆಲುಗಿನ ‘ಶಿವನಾಗಿಣಿ’ ಚಿತ್ರದಲ್ಲಿ ಕನ್ನಡತಿ ಮಮತಾ ರಾಹುತ್

ಸಾಮಾನ್ಯವಾಗಿ ಪರಭಾಷೆಗಳಿಂದ ಕನ್ನಡಕ್ಕೆ ಅನೇಕ ಕಲಾವಿದರು ಬರುತ್ತಾರೆ. ಅವರುಗಳ ಪೈಕಿ ಹೆಚ್ಚಾಗಿ ನಟಿಯರೇ ಆಗಿರುತ್ತಾರೆ. ಆದರೆ ಇತ್ತಿಚೆಗೆ ಕನ್ನಡದ ನಟಿಯರೂ ಸಹ ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅವರುಗಳ ಪೈಕಿ ಕನ್ನಡತಿ ಮಮತಾ ರಾಹುತ್ ಸಹ ಒಬ್ಬರು.

 

ಹೌದು, ಮಮತಾ ರಾಹುತ್ ಈಗಾಗಲೇ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದ ಹಾಗೆ ಇತ್ತಿಚೆಗಷ್ಟೇ ಅವರು ನಟಿಸಿದ್ದ ‘ಪುಣ್ಯಾತ್ ಗಿತ್ತೀರು’ ಸಿನಿಮಾ ತೆರೆ ಕಂಡಿತ್ತು. ಇದರ ಬೆನ್ನಿನಲ್ಲೇ ಅವರು ತೆಲುಗು ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ.

ಹೌದು, ಮಮತಾ ಸದ್ಯ ತೆಲುಗಿನಲ್ಲಿ ‘ಶಿವನಾಗಿಣಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಇವರ ನಟನೆಯ ತೆಲುಗಿನ ಏಳನೇಯ ಸಿನಿಮಾವಾಗಿದ್ದು, ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರವು ಪೌರಾಣಿಕ ಕಥೆಯನ್ನು ಒಳಗೊಂಡ ಸಾಹಸ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ.

 

ಸದ್ಯ ಚಿತ್ರದ ಕೆಲವೊಂದು ಸ್ಟಿಲ್ ಗಳು ಮೆಚ್ಚುಗೆ ಪಡೆಯುತ್ತಿದ್ದು, ಮಮತಾ ರಾಹುತ್ ಈ ಚಿತ್ರದಲ್ಲಿ ಫೈಟ್ ಸಹ ಮಾಡಿದ್ದಾರೆ. ಹಾಗೆಯೇ ಈ ಚಿತ್ರವು ಅವರಿಗೆ ಬಿಗ್ ಬ್ರೇಕ್ ಕೊಡುವ ನಿರೀಕ್ಷೆಯಲ್ಲಿದೆ.

ಇನ್ನು ಚಿತ್ರದಲ್ಲಿ ಮತ್ತಿಬ್ಬರು ನಟಿಯರು ನಟಿಸುತ್ತಿದ್ದು, ರಾಜಕಾಂತ್, ಸುರೇಶ್ ಹಾಗೂ ಗೋಪಿ ನಾಯಕನಟರಾಗಿದ್ದಾರೆ. ಚಿತ್ರವನ್ನು ಹರಿಬಾಬು ಮತ್ತು ಶ್ರೀಧರ ಪುವ್ವಾಲಾ ನಿರ್ಮಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸುಮನ್, ಶೈಯಾಜಿ ಶಿಂಧೆ, ಅಜಯ್ ಘೋಶ್, ಮುಕ್ತಾರ್ ಖಾನ್, ಹರಿಬಾಬು ಸೇರಿದಂತೆ ಅನೇಕರು ನಟಿಸುತ್ತಿದ್ದು, ಮೆಂಡಮ್ ಶ್ರೀಧರ್ ನಿರ್ದೇಶನವಿದೆ.

‘ಪೈಲ್ವಾನ್’ ನೋಡಿ ಸ್ಯಾಂಡಲ್ ವುಡ್ ತಾರೆಯರ ರಿಯಾಕ್ಷನ್

#Mamatharahuth #MamatharahuthMovies #MamatharahuthTeluguMovie #sandalwoodmovies  ‍#kannadasuddigalu

Tags