ಸುದ್ದಿಗಳು

ಕೊನೆಗೂ ರೂಲ್ಸ್ ಬ್ರೇಕ್ ಮಾಡಿದ ಲೇಡಿ ಸೂಪರ್ ಸ್ಟಾರ್

‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.  ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯ ತಯಾರಕರು ಚಿತ್ರದ ಕುರಿತು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ  ಒಬ್ಬರಾದ ಲೇಡಿ ಸೂಪರ್ ಸ್ಟಾರ್ ನಯನತಾರಾ  ತಮ್ಮ ಚಿತ್ರಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ. ಇದು ಚಲನಚಿತ್ರ ನಿರ್ಮಾಪಕರು ಮತ್ತು ಮಾಧ್ಯಮಗಳಿಗೆ  ಗೊತ್ತಿರುವ ಸಂಗತಿ.

ಆದರೆ ಇದೇ ಮೊದಲ ಬಾರಿಗೆ ನಯನತಾರಾ  ತಮ್ಮ ರೂಲ್ಸ್ ಬ್ರೇಕ್ ಮಾಡಿ ‘ಸೈ ರಾ’ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರಂತೆ.

ಹೌದು, ಕೆಲವು ಮೂಲಗಳ ಪ್ರಕಾರ ಮೆಗಾ ಸ್ಟಾರ್ ಚಿರಂಜೀವಿ ಅವರ ಕೋರಿಕೆಯ ಮೇರೆಗೆ ಸೈ ರಾ ಪ್ರಚಾರಕ್ಕೆ ನಯನತಾರಾ ಒಪ್ಪಿಕೊಂಡಿದ್ದಾರೆ.

ಮುಂಬೈ ಮತ್ತು ಚೆನ್ನೈನಲ್ಲಿ  ನಡೆಯುವ ಎರಡು ಕಾರ್ಯಕ್ರಮದಲ್ಲಿ ನಯನತಾರಾ ಹಾಜರಾಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಬ್ಯಾಕ್ ಲೆಸ್ ಡ್ರೆಸ್ ಫೋಟೋ ಶೇರ್ ಮಾಡಿದ ಕತ್ರಿನಾ: ಅರ್ಜುನ್ ಕಪೂರ್ ಕಮೆಂಟ್ ಹೀಗಿತ್ತು…

#balkaninews #nayanthara #tollywoodnews #syeraanarasimhareddy

Tags