ಸುದ್ದಿಗಳು

ಕೊರೊನಾ ಭೀತಿ ನಡುವೆಯೂ ರೊಮ್ಯಾನ್ಸ್ ಮಾಡುವುದು ಹೇಗೆ?

ನಟಿ ನಿತ್ಯಾ ರಾಮ್ ರೊಮ್ಯಾಂಟಿಕ್ ಪಾಠ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಇತ್ತೀಚಿಗೆ ಉದ್ಯಮಿ ಗೌತಮ್ ಅವರೊಂದಿಗೆ ವಿವಾಹವಾಗಿದ್ದರು. ಎಲ್ಲೆಡೆ ಕೊರೊನಾ ಭೀತಿ ಹರಡಿರುವ ಹಿನ್ನೆಲೆಯಲ್ಲಿ ನಿತ್ಯಾ ರಾಮ್ ಹೇಗೆ ಜವಾಬ್ದಾರಿಯುತವಾಗಿ ರೋಮ್ಯಾನ್ಸ್ ಮಾಡಬೇಕೆಂದು ಪಾಠ ಹೇಳಿಕೊಟ್ಟಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ನಿತ್ಯಾ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಪತಿ ಗೌತಮ್ ಹಾಗೂ ನಿತ್ಯಾ ಮಾಸ್ಕಾ ಹಾಕಿಕೊಂಡು ಲಿಪ್ ಲಾಕ್ ಮಾಡುತ್ತಿರುವ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಲಿಪ್ ಲಾಕ್ ಫೋಟೋಗೆ ‘ಜವಾಬ್ದಾರಿಯುತ ರೋಮ್ಯಾನ್ಸ್’ ಎಂದು ನಿತ್ಯಾ ಕ್ಯಾಪ್ಷನ್ ಸಹಾ ನೀಡಿದ್ದಾರೆ. ಇಷ್ಟೇ ಅಲ್ಲದೆ ಕೊರೊನಾ ವೈರಸ್ ನಿಂದ ಎಲ್ಲರು ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಸಹಾ ನಿತ್ಯಾ ಹಂಚಿಕೊಂಡಿದ್ದಾರೆ.

ನಿತ್ಯಾ ಈ ಫೋಟೋ ಹಂಚಿಕೊಳ್ಳುತ್ತಿಂದತೆಯೇ, ನೆಟ್ಟಿಗರಿಂದ ಕಮೆಂಟ್ಸ್ ಗಳ ಸುರಿಮಳೆ ಗೈದಿದ್ದಾರೆ. ಕೆಲವರು ಫೋಟೋವನ್ನು ಲೈಕ್ ಮಾಡಿ, ಒಳ್ಳೆಯ ಸಂದೇಶ ಎಂದು ಪ್ರಶಂಸಿದ್ದಾರೆ. ಆದರೆ ಹಲವರು ನಿತ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊರೊನಾ ಹರಡುತ್ತಿರುವ ಸಮಯದಲ್ಲಿ ಲಿಪ್ ಲಾಕ್ ಮಾಡಿರುವುದು ಬೇಜವಾಬ್ದಾರಿಯ ಕೆಲಸ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಭೀತಿಯ ನಡುವೆಯು ರೋಮ್ಯಾನ್ಸ್ ಮಾಡುವುದು ಹೇಗೆ ಎಂದು ನಿತ್ಯಾ ಹೇಳಿಕೊಟ್ಟಿರುವ ಪಾಠ ಎಲ್ಲರ ಗಮನ ಸೆಳೆಯುತ್ತಿದೆ.

श्लोका फाउंडेशन इंडिया के फूड लैंडस्केप को बदल देगा- निधि कुमार

Tags