ಸುದ್ದಿಗಳು

ಮಾರ್ಡನ್ ಲುಕ್ ನಲ್ಲಿ ಪೋಟೋಗೆ ಫೋಸ್ ನೀಡಿದ ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ

ಬೆಂಗಳೂರು, ,ಮೇ.22:

‘ಗೊಂಬೆಗಳ ಲವ್’ ಚಿತ್ರದ ಮೂಲಕ ಗಮನ ಸೆಳೆದವರಲ್ಲಿ ನಟಿ ಪಾವನಾ ಕೂಡಾ ಒಬ್ಬರು. ಈ ಚಿತ್ರದ ನಂತರ ‘ಜಾಕ್ಸನ್’, ‘ವೆನಿಲ್ಲಾ’ ಅದ್ವೈತ, ‘ಜಟ್ಟ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂತಿಪ್ಪ  ಮುದ್ದು ಮುಖದ ಚೆಲುವೆ ಪಾವನಾ ಇದೀಗ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಹೌದು, ಗೊಂಬೆಗಳ ಲವ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟಿ ಪಾವನಾ ಇದೀಗ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದಾ ಕಾಲ ಸಾಂಪ್ರದಾಯಿಕ ಉಡುಗೆಗಳಲ್ಲಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದ ಈ ಚೆಲುವೆ ಇದೀಗ ತಮ್ಮ ಮಾರ್ಡನ್ ಲುಕ್ ಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಖ್ಯಾತ ಛಾಯಾಗ್ರಾಹಕ ಅಭಿಷೇಕ್ ಎಸ್ ಎನ್ ರವರು ಪಾವನಾರವರ ಪೋಟೋಶೂಟ್ ಮಾಡಿದ್ದಾರೆ. ಬಗೆ ಬಗೆಯ ಉಡುಪುಗಳನ್ನು ಧರಿಸಿ ಪೋಟೋಗೆ ಪೋಸ್ ನೀಡಿದ್ದಾರೆ. ಈ ಪೋಟೋಗಳನ್ನು ನೋಡುತ್ತಿದ್ದರೇ, ಇವರೇ ‘ಗೊಂಬೆಗಳ ಲವ್’ ಪಾವನಾ ಎನ್ನುವಷ್ಟರ ಮಟ್ಟಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮ್ಮ ಮೊದಲ ಚಿತ್ರದಿಂದಲೇ ಅಭಿನಯದ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ನಟಿಯರಲ್ಲಿ ಪಾವನಾ ಸಹ ಒಬ್ಬರು. ನಾಯಕಿಯ ಪಾತ್ರವೇ ಇರಲಿ, ಚಿಕ್ಕ ಪಾತ್ರವೇ ಇರಲಿ. ಅದಕ್ಕವರು ಜೀವ ತುಂಬುತ್ತಾರೆ. ಇಷ್ಟೇ ಅಲ್ಲದೇ ‘ಫೈಟರ್’, ‘ಪ್ರಭುತ್ವ’, ‘ಮೈಸೂರು ಡೈರೀಸ್’, ‘ರುದ್ರಿ’ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಇವರ ಮುಂದಿನ ಸಿನಿ ಪಯಣ ಸುಖಮಯವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

Image may contain: 1 person, standing

Image may contain: 1 person, text

Image may contain: 1 person, text

Image may contain: 1 person, standing

Image may contain: 1 person

Image may contain: 1 person, sitting and shoes

Image may contain: 1 person, standing and outdoor

Image may contain: 1 person, smiling, standing

Image may contain: 1 person, smiling

ನಾಳೆಯಿಂದ ಅಂಬರೀಶ್ ಫ್ಯಾಮಿಲಿ ಪ್ಯಾಕೇಜ್ ಶುರು..!!!

#actresspaavana #actresspaavanamovies #paavaninstagram #paavanafacebook #gombegalalovemovie

Tags